ವಿಶ್ವ ಸಾಹಿತ್ಯಕ್ಕೆ ಕೊಡುಗೆ ಅಪಾರ

UNTILETED 13
ಕಂಪ್ಲಿಯಲ್ಲಿ ಎಸ್.ಎಲ್.ಭೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಪರಿಷತ್ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪದಾಧಿಕಾರಿಗಳಾದ ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಹಾದಿಮನಿ ಕಾಳಿಂಗವರ್ಧನ, ಬಡಿಗೇರ ಜಿಲಾನ್‌ಸಾಬ್ ಇತರರಿದ್ದರು.
Published on

ಕಂಪ್ಲಿ: ಕನ್ನಡದ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಹೊಸ ಚಿಂತನೆಯನ್ನು ಮೂಡಿಸಲಿದ್ದು, ಯುವಪೀಳಿಗೆಯ ಬರಹಗಾರರಿಗೆ ದಿಕ್ಸೂಚಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಹೇಳಿದರು.

ಪಟ್ಟಣದ ಗಂಗಾಸಂಕೀರ್ಣದಲ್ಲಿ ಗುರುವಾರ ಕಸಾಪದಿಂದ ಹಮ್ಮಿಕೊಂಡಿದ್ದ ಎಸ್.ಎಲ್.ಭೈರಪ್ಪಗೆ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಭೈರಪ್ಪರ ಸಮಗ್ರ ಸಾಹಿತ್ಯವು ಲೋಕಾನುಭವ, ಸಂಚಾರ ಮತ್ತು ಅನುಭಾವದಿಂದ ಕೂಡಿದ್ದು ವಿಶ್ವ ಸಾಹಿತ್ಯಕ್ಕೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.

ಜೆಸಿಐ ಪೂರ್ವ ವಲಯ ರಾಜ್ಯ ಉಪಾಧ್ಯಕ್ಷ ಸಂತೋಷ ಕೊಟ್ರಪ್ಪ ಸೋಗಿ ಮಾತನಾಡಿ, ಭೈರಪ್ಪನವರ ಸಾಹಿತ್ಯ ಓದುವುದೆಂದರೆ ಪರಂಪರೆ, ಸಂಸ್ಕೃತಿಯನ್ನು ಓದಿದಂತೆ ಆಗುತ್ತದೆ. ಅಗಾಧ ಪಾಂಡಿತ್ಯವುಳ್ಳ ಅವರ ಕಾದಂಬರಿಗಳು ಸಾಹಿತ್ಯ ವಲಯದಲ್ಲಿ ಹೊಸ ದಿಕ್ಕನ್ನೆ ತೆರೆದಿವೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಹಾದಿಮನಿ ಕಾಳಿಂಗವರ್ಧನ, ಬಡಿಗೇರ ಜಿಲಾನ್‌ಸಾಬ್, ಅಶೋಕ ಕುಕನೂರು, ಯು.ಎಂ.ವಿದ್ಯಾಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net