

ಕಂಪ್ಲಿ: ಮಹರ್ಷಿ ವಾಲ್ಮೀಕಿ ಜೀವನ ನಮ್ಮೆಲ್ಲರ ಪರಿವರ್ತನೆಗೆ ಮಾದರಿ ಆಗಬೇಕಿದೆ ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಲ್ಮೀಕಿ ರಾಮಾಯಣವು ಕೇವಲ ಮಹಾಕಾವ್ಯವಾಗದೆ, ಏಕಪತ್ನಿ ವ್ರತ, ಕುಟುಂಬ ಪ್ರೀತಿ, ಕೂಡಿ ಬಾಳುವ ಪರಿಕಲ್ಪನೆ, ಧರ್ಮ, ನ್ಯಾಯ ನೀತಿಯಿಂದ ಬಾಳಬೇಕೆಂಬ ರಾಮರಾಜ್ಯವನ್ನು ಪ್ರತಿಪಾದಿಸುತ್ತದೆ. ವಾಲ್ಮೀಕಿ ರಾಮಾಯಣದ ತಿರುಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ ಮಾತನಾಡಿ, ಅ.24ರಂದು ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಅಂದು ಸಮುದಾಯ ಭವನವನ್ನು ಶಾಸಕ ಜೆ.ಎನ್.ಗಣೇಶ ಉದ್ಘಾಟಿಸಲಿದ್ದಾರೆ ಎಂದರು.
ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಎಪಿಎಂಸಿ ಅಧ್ಯಕ್ಷ ಜಿ.ಅಂಜಿನಪ್ಪ, ನಿಲಯ ಪಾಲಕ ಗುರುರಾಜ, ಕೆ.ವಿರೂಪಾಕ್ಷಪ್ಪ, ಪ್ರಮುಖರಾದ ಬಿ.ಅಂಬಣ್ಣ, ಡಾ.ವೆಂಕಟೇಶ, ಎನ್.ರಾಮಾಂಜನೇಯಲು, ವಿ.ಮರಿಲಿಂಗಪ್ಪ, ವಾಲ್ಮೀಕಿ ಈರಣ್ಣ, ಬಿ.ಬಸಪ್ಪ, ನೀರಗಂಟಿ ವೀರೇಶ, ಪೈಲ್ವಾನ್ ವೀರೇಶ, ಎನ್. ದುರುಗಪ್ಪ ಇತರರಿದ್ದರು.
ಫ್ಯಾಕ್ಟ್ರಿಯ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಪ್ರಮುಖರಾದ ಲಕ್ಷ್ಮಣ, ಕಿಶೋರ್, ಪಿ.ವೀರೇಶ, ನಾಗರಾಜ, ಆದಿನಾರಾಯಣ, ದೇವರಾಜ, ರಾಮಾಂಜನಿ, ಲಕ್ಷ್ಮೀಪತಿ ಇತರರಿದ್ದರು.