

ಲಿಂಗಸುಗೂರು: ಪಟ್ಟಣದಿಂದ ಹಟ್ಟಿ ವಯಾ ಗುಡದನಾಳವರೆಗೆ ಮೂರು ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕಾಮಗಾರಿ ನಿಗದಿತ ಆರು ತಿಂಗಳೊಳಗೆ ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸಬೇಕೆಂದು ಪಿಡಬ್ಲುೃಡಿ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ, ಗುತ್ತಿಗೆದಾರ ಆದಪ್ಪ ಮನಗೂಳಿ, ಪ್ರಮುಖರಾದ ಗಿರಿಮಲ್ಲನಗೌಡ ಪಾಟೀಲ್, ಹುಲ್ಲೇಶ ಸಾಹುಕಾರ, ಲಿಂಗಪ್ಪ ದೇವಿಕೇರಿ, ವೆಂಕನಗೌಡ ಗುಡದನಾಳ, ಶರಣಬಸವ, ಪಿಡಬ್ಲುೃಡಿ ಎಇ ಬಸವರಾಜ ಬಸ್ತಾನಿ ಇತರರಿದ್ದರು.