

ಮುಗಳಿಹಾಳ: ಜನತೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಸಮೀಪದ ತಾವಲಗೇರಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ 20 ಲ ರೂ. ವೆಚ್ಚದ ಸಿಸಿ ರಸ್ತೆ, 20 ಲ ರೂ. ವೆಚ್ಚದ ಕೋಟೂರ ಗ್ರಾಮದ ಸಿಸಿ ರಸ್ತೆ ಮತ್ತು 15 ಲ ರೂ. ವೆಚ್ಚದ ಯರಗಣವಿ ಗ್ರಾಮದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ೇತ್ರದ ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ ಹಂತ ಹಂತವಾಗಿ ಕಲ್ಪಿಸಲಾಗುವುದು. ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವದ್ಧಿ ಕಾರ್ಯ ಮಾಡುತ್ತಿದೆ. ಗುಣಮಟ್ಟದ ಜತೆಗೆ ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸಣ್ಣವರ, ಮಲಿಕಸಾಬ್ ಭಾಗವಾನ್, ಪ್ರಕಾಶ ಸುಣಧೋಳಿ, ಮಾಡಮಗೇರಿ ಗ್ರಾಪಂ ಅಧ್ಯ ಲಕ್ಕಪ್ಪ ಸಣ್ಣಲಿಂಗನವರ, ದ್ಯಾಮಣ್ಣ ಬಂಡಿವಡ್ಡರ, ಸಿದ್ದಪ್ಪ ಬುರ್ಲಿ, ಭರಮಣ್ಣ ಕುರಿ, ಚಿಂತಾಮಣಿ ಬಂಡಿವಡ್ಡರ, ಈಶ್ವರ ತಳನಟ್ಟಿ, ಗಿಡ್ಡಪ್ಪ ಖಂಡ್ರಿ, ಪರಮೇಶ ಚತ್ರಕೋಟಿ, ಯರಗಟ್ಟಿ & ಮುನವಳ್ಳಿ ಯೂತ್ ಕಾಂಗ್ರೆಸ್ ಉಪಾಧ್ಯ ಮುತ್ತು ದಳವಾಯಿ, ವಿಠ್ಠಲ ಮಾಲದಿನ್ನಿ, ಭರಮಣ್ಣ ಹಕ್ಕಿ ಇತರರಿದ್ದರು.