

ಕಲಕೇರಿ: ಪೀರಾಪುರ & ಬೂದಿಹಾಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲೂಕಿನ ಪೀರಾಪುರ&ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ಪದಾಧಿಕಾರಿಗಳು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಯೋಜನೆಗಾಗಿ ಸರ್ಕಾರ ಈಗಾಗಲೇ 800 ಕೋಟಿ ರೂ. ಹಣ ವ್ಯಯ ಮಾಡಿದೆ. ಆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೊಲಗಾಲುವೆ ಕಾಮಗಾರಿ ಶೇ.10 ರಷ್ಟು ಬಾಕಿ ಇದ್ದು, ಬೇಸಿಗೆಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಈ ಪ್ರದೇಶದಲ್ಲಿ ಅಂತರ್ಜಲಮಟ್ಟ ಶೋಚನೀಯವಾಗಿದ್ದು. ಹಳ್ಳಿಗಳ ಜನರು ಬೆಂಗಳೂರು, ಮುಂಬಯಿ, ಗೋವಾ, ಪುಣೆ, ರತ್ನಾಗಿರಿ, ಪಣಜಿ, ಕರಾಡಗಳಿಗೆ ಕೆಲಸಕ್ಕೆ ಗುಳೆ ಹೋಗುತ್ತಿದ್ದಾರೆ. ಈ ಯೋಜನೆ ಪೂರ್ಣ ಅನುಷ್ಠಾನವಾದಲ್ಲಿ ಈ ಭಾಗದ 38 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರಮುಖರಾದ ಪ್ರಭುಗೌಡ ಬಿರಾದಾರ, ರವೀಂದ್ರ ಸುಧಾಕರ್, ಅಶೋಕ ದೊರೆಗೋಳ, ಮಹಾಂತೇಶ ಕಾಂಬಳೆ, ರುದ್ರಗೌಡ ಬಿರಾದಾರ, ಶಿವಪುತ್ರ ಚೌಧರಿ, ಜಿ.ಬಿ. ಬಾಗೇವಾಡಿ ಇದ್ದರು.