ಸಂಪೂರ್ಣ ತಿಳಿವಳಿಕೆ ಅವಶ್ಯ

1
ಐಗಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಎಸ್. ಯಾದವಾಡ ಮಾತನಾಡಿದರು. ಶಕುಂತಲಾ ಪಾಟೀಲ, ಮಹಾಂತೇಶ ಗುಡದಿನ್ನಿ, ಬಿ.ಎಸ್.ಬಿರಾದಾರ ಇತರರಿದ್ದರು.
Published on

ಐಗಳಿ: ಸಂವಿಧಾನ ಕಾನೂನು ಕುರಿತು ಪ್ರತಿಯೊಬ್ಬರೂ ತಿಳಿವಳಿಕೆ ಹೊಂದಿರುವುದು ಅವಶ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಎಸ್. ಯಾದವಾಡ ಹೇಳಿದರು.

ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಸಿಆರ್‌ಪಿ ಮಹಾಂತೇಶ ಗುಡದಿನ್ನಿ, ಗ್ರಾಪಂ ಸದಸ್ಯರಾದ ಬಿ.ಎಸ್.ಬಿರಾದಾರ, ಶ್ರೀಶೈಲ ಮಿರ್ಜಿ, ರವೀಂದ್ರ ಹಾಲಳ್ಳಿ, ಕಾಶಿನಾಥ ಗದಾಡೆ, ಎ.ಎಸ್.ಪಾಟೀಲ, ಭೀಮವಾದ ಚಿಕ್ಕೋಡಿ ಜಿಲ್ಲಾ ಸಂಚಾಲಕಿ ನಿಖಿತಾ ಗದಾಡೆ, ಮುಖಂಡ ರಮೇಶ ಸಪ್ತಸಾಗರ, ಬಸಪ್ಪ ಮಾದರ, ಕುಮಾರ ಶಿಂಗೆ, ರಾಚಪ್ಪ ಮಾದರ, ಪಿಡಿಒ ರಾಜೇಂದ್ರ ಪಾಠಕ್, ಅಪ್ಪಾಸಾಬ ಮದಬಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net