ಪೂರಕ ವಾತಾವರಣ ನಿರ್ಮಾಣಗೊಳ್ಳಲಿ

17KAGWAD1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಕಾಗವಾಡ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಹೊರಹೊಮ್ಮುತ್ತಿದ್ದರೆ, ಇನ್ನುಳಿದ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದು ಹಿಂದೆ ಬೀಳುತ್ತಿದ್ದಾರೆ. ಇದರಿಂದ ಪ್ರಥಮ ಮತ್ತು ಕೊನೆಯ ಶ್ರೇಣಿಯಿಂದ ಮಕ್ಕಳಲ್ಲಿ ಕಂದಕ ನಿರ್ಮಾಣಗೊಳ್ಳುತ್ತಿರುವುದು ವಿಷಾಧನೀಯ ಎಂದು ನಿವೃತ್ತ ಶಿಕ್ಷಕಿ ಡಾ.ಭಾರತಿ ಸವದತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮತಿ ಮಹೋತ್ಸವ-74, ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಅವಶ್ಯಕ ಎಂದರು.

ದೇಣಿಗೆ ನೀಡಿದ ಗಣ್ಯರು, ಆದರ್ಶ ಶಿಕ್ಷಕ, ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಡಾ.ಎಸ್.ಬಿ.ಪಾಟೀಲ, ಶಾಂತಿನಾಥ ಪಾಟೀಲ, ಸಂಗೀತಾ ಪಾಟೀಲ, ಮಹಾವೀರ ಪಾಲಗೌಡರ, ಸುನೀತಾ ಪಾಲಗೌಡರ, ಅಮೋಲ ಪಾಲಗೌಡರ, ಅಶೋಕ ವಿಭೂತೆ, ಪ್ರಕಾಶ ಐನಾಪೂರೆ, ಡಾ.ರಮೇಶ ಐನಾಪೂರೆ, ಕೈಲಾಶ ಪುರಮವರ, ಮಹೇಂದ್ರ ಕುಸನಾಳೆ, ವಿನೋದ ಪಾಟೀಲ, ಎಸ್‌ಎಸ್‌ಎಸ್ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಆರ್.ವಿ.ಸಂಗೋರಾಮ, ಮುಖ್ಯ ಶಿಕ್ಷಕಿ ಎಂ.ಎನ್.ಕಾಳೇನಟ್ಟಿ, ಸಿಇಒ ಸತೀಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net