

ಕೊಳ್ಳೇಗಾಲ : ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸೋಮವಾರ ರೋಗಿಗಳು ಲಿಖಿತ ದೂರು ನೀಡಿದರು.
ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ ಮಾತನಾಡಿ, ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಸೇವೆಯನ್ನು ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ ಇದರಿಂದ ನಮ್ಮ ಆರೋಗ್ಯ ಏರುಪೇರು ಆಗುತ್ತಿದೆ. ಒಂದು ವಾರದಲ್ಲಿ ನಮಗೆ ಮೂರು ಬಾರಿ ಡಯಾ ಲಿಸಿಸ್ ಸೇವೆ ಅಗತ್ಯವಿರುತ್ತದೆ. ಆಸ್ಪತ್ರೆಯ ಅಧಿಕಾರಿಗಳು ಎರಡು ಬಾರಿ ಮಾತ್ರ ಡಯಾಲಿಸಿಸ್ ಸೇವೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಇದರಿಂದ ನಮಗೆ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಶಾಸಕರ ಮುಂದೆ ಅಳಲು ತೋಡಿಕೊಂಡರು.
ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸ್ಥಳದಲ್ಲಿಯೆ, ಡಿಎಚ್‌ಒ ಚಿದಂಬರಂ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ರೋಗಿಗಳ ಸಮಸ್ಯೆಯನ್ನು ಗಮನಕ್ಕೆ ತರು ವುದಲ್ಲದೆ, ಕೂಡಲೇ ರೋಗಿಗಳಿಗೆ ಅನುಕೂಲವಾಗುವ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಕ್ರಮ ವಹಿಸಲು ಸೂಚನೆ ನೀಡಿದರು. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಅಗತ್ಯ ವಿರುವ ರೋಗಿಗಳಿಗೆ ಅದರಂತೆ ಚಿಕಿತ್ಸೆ ನೀಡಬೇಕೆಂದರು.