ಮಾನವ ಹಕ್ಕು ಆಯೋಗಕ್ಕೆ ದೂರು: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕ್ರಮಕ್ಕೆ ಒತ್ತಾಯ

BJP complains to Child Commission against Rahul Gandhi mandya
Published on

ಮಂಡ್ಯ: ರೌಡಿಶೀಟರ್‌ನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿರುವ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾನವ ಹಕ್ಕು ಆಯೋಗಕ್ಕೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಆದರೆ, ಆ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕುಖ್ಯಾತ ರೌಡಿಶೀಟರ್. ಈತ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಳೇ ಹುಬ್ಬಳ್ಳಿ ಶಿವಶಂಕರ್ ಕಾಲನಿಯ ತಾಂಡಾ ನಿವಾಸಿ ಈ ಮದನ ಬುಗಡಿ. ಕೊಲೆ, ಕೊಲೆ ಯತ್ನ, ಸುಲಿಗೆ, ದೊಂಬಿ, ದನಗಳ್ಳತನ ಸೇರಿ ವಿವಿಧ ಪ್ರಕರಣಗಳು ಈತನ ಮೇಲಿವೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 2017ರಲ್ಲಿ ನಡೆದ ದೊಡ್ಡಮನಿ ಎಂಬವರ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಇದ್ದಾನೆ. ಹುಬ್ಬಳ್ಳಿ ತಾಲೂಕಿನ ಕುಸಗಲ್‌ನಲ್ಲಿ ನಡೆದಿದ್ದ ಪರಶುರಾಮ್ ದೊಡ್ಡಮನಿ ಕೊಲೆ ಪ್ರಕರಣದಲ್ಲಿ ಬುಗಡಿ 2ನೇ ಆರೋಪಿಯಾಗಿದ್ದಾನೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಕೊಲೆ ಪ್ರಕರಣದಲ್ಲಿ ಮದನ್ ಬುಗಡಿ ಬಿಡುಗಡೆಯಾಗಿದ್ದಾನೆ. ದನಗಳ ಕಳ್ಳತನ ಮಾಡುವಲ್ಲಿ ಈತ ನಿಸ್ಸೀಮ ಈ ಬಗ್ಗೆ ಪೊಲೀಸ್ ವರದಿಯಲ್ಲಿದೆ ಎಂದು ವಿವರಿಸಿದ್ದಾರೆ.

ಸುಲಿಗೆ ದರೋಡೆ ಸೇರಿ ಹಲವಾರು ಪ್ರಕರಣಗಳಲ್ಲಿ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ಮದನ್ ಮೇಲೆ ಪ್ರಕರಣ ದಾಖಲಾಗಿವೆ. ಪ್ರತಿ ರೌಡಿ ಪರೇಡ್‌ನಲ್ಲಿ ಆತ ಹಾಜರಾಗುತ್ತಾನೆ. ಡಿ.30ರಂದು ನಡೆದಿದ್ದ ರೌಡಿ ಪರೇಡ್ ವೇಳೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾಗಿ ಒಬ್ಬ ರೌಡಿ ಶೀಟರ್‌ನನ್ನೇ ಮಾನವ ಹಕ್ಕು ಅಧಿಕಾರಿ ಎಂದು ಹೇಳಿ ಇನ್ನು ಹಲವಾರು ಅಪರಾಧವನ್ನು ಮಾಡಿರುವ ಶಂಕೆ ಇದೆ. ಹಾಗಾಗಿ ಗಿರೀಶ್ ಮಟ್ಟಣ್ಣನವರ್ ಹಾಗು ಮದನ್ ಬುಗಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Complaint to the Human Rights Commission Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net