

ತಂಗಡಗಿ: ಮುದ್ದೇಬಿಹಾಳ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಿಂದ ಕಳಪೆ ತೊಗರಿ ಬೀಜ ವಿತರಣೆ ಮತ್ತು ಪ್ರಕರಣ ಎದುರಿಸುತ್ತಿರುವ ಏಜನ್ಸಿಯವರಿಂದ ಬೀಜ ವಿತರಣೆ ಮಾಡಿ ಭ್ರಷ್ಟಾಚಾರ ಎಸಗಿ ರೈತರ ಜೀವಕ್ಕೆ ಕುತ್ತು ತಂದಿರುವ ಅಧಿಕಾರಿಗಳು, ಏಜನ್ಸಿಯವರ ವಿರುದ್ಧ ಕ್ರಮ ಜರುಗಿಸಿ ಜೈಲಿಗೆ ಕಳಿಸುವಂತೆ ಆಗ್ರಹಿಸಿ ಇಲ್ಲಿನ ಗ್ರಾಪಂ ಮಾಜಿ ಅಧ್ಯ, ಕರ್ನಾಟಕ ರಣಾ ವೇದಿಕೆಯ ಸ್ವಾಭಿಮಾನಿ ಬಣದ ಮುದ್ದೇಬಿಹಾಳ ತಾಲೂಕು ಅಧ್ಯ ಸಂಗಯ್ಯ ಸಾರಂಗಮಠ ಅವರು ಗುರುವಾರ ವಿಜಯಪುರದ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರಿಂದ ರೈತರು ವಾಣಿಜ್ಯ ಬೆಳೆ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಇದೀಗ ಹೂವು ಉದುರಿ ಕಾಳು ಕಟ್ಟದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ರೈತ ಸಂಪರ್ಕ ಕೇಂದ್ರಗಳು ವಿತರಿಸಿರುವ ಕಳಪೆ ಬೀಜಗಳು ಕಾರಣ. ಮಂಜು ಬಿದ್ದು ಹೂವು ಉದುರಿದೆ ಎನ್ನುವ ಕಾರಣವನ್ನು ಕೃಷಿ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಲಬುರ್ಗಿಯಿಂದ ತಂದಿರುವ, ರೈತರ ಮನೆಗಳಲ್ಲಿನ ಹಳೇ ಬೀಜಗಳಿಂದ ಸಮಸ್ಯೆ ಆಗಿಲ್ಲ. ರೈತರಿಂದ ತೊಗರಿ ಸಂಗ್ರಹಿಸುವ ಕೆಲವು ಏಜನ್ಸಿಯವರು ಬೀಜೋಪಚಾರ ಮಾಡದೆ ಕಳಪೆ ಬೀಜಗಳನ್ನು ಪ್ರಮಾಣೀಕೃತ ಬೀಜಗಳಲ್ಲಿ ಸೇರಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಆರ್ಜಿ 152, 811 ತಳಿಯ ಬೀಜಗಳು ಕಳಪೆ ಎನ್ನುವ ಸಂಶಯ ಮೂಡಿದೆ. ರೈತರಿಗೆ ಬೀಜ ವಿತರಿಸುವಾಗ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಕಂಪನಿಯವರು ನೀಡಿದ ಬೀಜ ಉತ್ತಮವಾಗಿದ್ದು ಒಣ ಬೇಸಾಯದಲ್ಲಿ ಹೆಚ್ಚಿನ ಇಳುವರಿ ನೀಡುತ್ತದೆ. ನೆಟೆ ರೋಗ ಬರುವುದಿಲ್ಲ ಎಂದು ನಂಬಿಸಿದ್ದಾರೆ.
ತೊಗರಿ ಹಾಳಾದ ನಂತರ ಸರಿಯಾಗಿ ಬಿತ್ತಿಲ್ಲ, ನೀರು ಒದಗಿಸಿಲ್ಲ, ಬಿತ್ತಿದ ಸಾಲು ಮತ್ತು ಅಂತರ ಸರಿಯಾಗಿಲ್ಲ ಎಂದು ಅಧಿಕಾರಿಗಳು ರೈತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಇದನ್ನು ರೈತರು ಪ್ರತಿಭಟಿಸಿದಾಗ ತಮ್ಮ ತಪ್ಪು, ಭ್ರಷ್ಟಾಚಾರ ಮರೆಮಾಚಲು ಪ್ರಕೃತಿಯಲ್ಲಿ ಮಂಜು ಬಿದ್ದು ಸಮಸ್ಯೆ ಆಗಿದೆ ಎಂದು ಪ್ರಕೃತಿಯನ್ನು ದೂರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆ ಕಕ್ಕೇರಾ ರೈತ ಸಂಪರ್ಕ ಕೇಂದ್ರಕ್ಕೆ ಕಳಪೆ ಶೇಂಗಾ ಬೀಜ ವಿತರಣೆ ಮಾಡಿದ್ದಕ್ಕೆ ಸುರಪುರದ ಕೋರ್ಟನಲ್ಲಿ ಪ್ರಕರಣ ಎದುರಿಸುತ್ತಿರುವ ನಾಲತವಾಡದ ಅಮರೇಶ್ವರ ಸೀಡ್ಸ್ ಏಜನ್ಸಿಯವರಿಗೆ ಢವಳಗಿ ಆರ್ಎಸ್ಕೆ ಮೂಲಕ ಬೀಜ ಬಿತರಣೆಗೆ ಅವಕಾಶ ಕೊಟ್ಟಿರುವಲ್ಲಿ ಅಧಿಕಾರಿಗಳು ದುಡ್ಡು ಮಾಡುವ ಉದ್ದೇಶದಿಂದ ಭ್ರಷ್ಟಾಚಾರ ಮಾಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಮುಂಚಿತವಾಗಿಯೇ ಮಾಹಿತಿ ನೀಡದೆ ಬೆಳೆ ಹಾಳಾದ ನಂತರ ರೈತರ ಮೇಲೆ ತಪ್ಪು ಹೊರಿಸುತ್ತಿರುವ, ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ರೈತರ ಬೆನ್ನೆಲುಬು ಮುರಿದಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಕಳಪೆ ಬೀಜ ವಿತರಿಸಿದ ಕಂಪನಿ, ಏಜನ್ಸಿಗಳು, ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲು ಶಿೆ ವಿಧಿಸಬೇಕು. ಮೋಸ ಹೋದ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ವಿಮಾ ಹಣವನ್ನು ಕೊಡಿಸಲು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದ.