ಕಂದಾಯ ಇಲಾಖೆ ನೌಕರರಿಂದ ಡಿಸಿಗೆ ದೂರು ಸಲ್ಲಿಕೆ

crime 5
Published on


ಮೈಸೂರು ತಹಸೀಲ್ದಾರ್, ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರ ವಿರುದ್ಧ ಎಫ್‌ಐಆರ್ ಹಿನ್ನೆಲೆ
ಭೂ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಂದ ದೂರು

ಮೈಸೂರು: ಮೈಸೂರು ತಹಸೀಲ್ದಾರ್ ವಿರುದ್ಧ ದೂರುದಾರರು ನೀಡಿದ ಅರ್ಜಿ ಪರಿಶೀಲಿಸದೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿ, ಕಂದಾಯ ಇಲಾಖೆ ನೌಕರರು ಬುಧವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.


ಮೈಸೂರು ತಾಲೂಕು ತಹಸೀಲ್ದಾರ್, ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗ ಸೇರಿದಂತೆ ಇನ್ನಿತರರ ವಿರುದ್ಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಭೂ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ದೂರು ಕೊಟ್ಟ ನಂತರ ಸಂಬಂಧಿಸಿದ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಏಕಾಏಕಿ ಎಫ್‌ಐಆರ್ ಹಾಕಿರುವುದು ದೊಡ್ಡ ವಿವಾದವನ್ನುಂಟು ಮಾಡಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಕಂದಾಯ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಮೌನವಾಗಿ ನಿಂತುಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ದೂರಿನ ಬಗ್ಗೆ ಪರಿಶೀಲಿಸದೆ ನನ್ನ ವಿರುದ್ಧ ನೇರವಾಗಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಪೌತಿಖಾತೆ ಪ್ರಕರಣದಲ್ಲಿ ತಹಸೀಲ್ದಾರ್ ಪಾತ್ರ ಇರುವುದಿಲ್ಲ. ವಿಎ, ಆರ್‌ಐ ತಪ್ಪು ಮಾಡಿದ್ದರೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಬಹುದಿತ್ತು. ನಾನೇ ತಪ್ಪು ಮಾಡಿದ್ದರೆ ಜಿಲ್ಲಾಧಿಕಾರಿಗೆ ದೂರು ಕೊಡಬಹುದಿತ್ತು. ಆದರೆ ಯಾರ ಗಮನಕ್ಕೂ ತಾರದೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ನನ್ನ ಕೆಲಸ ಸಹಿಸಲಾರದೆ ಎಫ್‌ಐಆರ್‌ಗೆ ಹೆಸರು ಸೇರಿಸಿದ್ದಾರೆ. ಇದುವರೆಗೂ ನನಗೆ ಪೊಲೀಸ್ ಇಲಾಖೆ ಅಥವಾ ಕೋರ್ಟ್‌ನಿಂದ ವಾಹಿತಿ ಬಂದಿಲ್ಲ ಎಂದು ತಹಸೀಲ್ದಾರ್ ಗಿರೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net