13ರಂದು ಕೆ.ಆರ್.ಪೇಟೆಯಲ್ಲಿ ದೂರು ಸ್ವೀಕಾರ: ಲೋಕಾಯುಕ್ತ ಪೊಲೀಸರಿಂದ ಸಭೆ ಆಯೋಜನೆ

karnataka lokayukta
ಲೋಕಾಯುಕ್ತ ಕಚೇರಿ
Published on

ಮಂಡ್ಯ: ಲೋಕಾಯುಕ್ತ ವಿಭಾಗದಿಂದ ನ.13ರಂದು ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು/ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿದೆ.

ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡುತ್ತಿದ್ದರೆ ಅಂದು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಲೋಕಾಯುಕ್ತ ಡಿವೈಎಸ್‌ಪಿ ಎಚ್.ಟಿ.ಸುನಿಲ್ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಆರ್.ಎಂ.ಮೋಹನ್‌ರೆಡ್ಡಿ, ಎಂ.ಜಯರತ್ನಾ, ಬಿ.ಪಿ.ಬ್ಯಾಟರಾಯಗೌಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net