ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಯುವಕ

Love sex and Dhokha
Published on

ಮುಂಡಗೋಡ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ ಯುವಕ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಖಂಡೆಬಾಗೂರ ಗ್ರಾಮದ 19 ವರ್ಷದ ಯುವತಿ ದೂರು ದಾಖಲಿಸಿದ್ದು, ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಪ್ರಸಾದಕುಮಾರ ಪ್ರಕಾಶ ಭಡಂಗಕರ (21), ಪ್ರಕಾಶ ಭಡಂಗಕರ, ಶಾಂತಾ ಭಡಂಗಕರ ಎಂಬುವರ ಮೇಲೆ ದೂರು ದಾಖಲಾಗಿದೆ.


ಪ್ರಸಾದಕುಮಾರ ಎಂಬವನು ಯುವತಿಯನ್ನು ಪ್ರೀತಿಸುತ್ತಿದ್ದ. ನಿನ್ನನ್ನೇ ಮದುವೆಯಾಗುವುದಾಗಿ 2022ರ ಆಗಸ್ಟ್ 28ರಂದು ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೀಗ ಮದುವೆಯಾಗು ಅಂದರೆ ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾನೆ. ಈ ವಿಷಯವನ್ನು ಆರೋಪಿಯ ತಂದೆ- ತಾಯಿಗೆ ತಿಳಿಸಿದರೂ ನೀನು ಅನ್ಯ ಜಾತಿಯವಳು ಹೀಗಾಗಿ, ನಮ್ಮ ಮಗ ನಿನ್ನನ್ನು ಮದುವೆ ಆಗುವುದಿಲ್ಲ ಎಂದು ಹೇಳುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎರಡು ದಿನಗಳ ಹಿಂದೆ ಯುವತಿ ಯುವಕನ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net