ಗೌಡ ಯುವ ವೇದಿಕೆಯಿಂದ ದೂರು

gowda yuva vedike
Published on

ಮಡಿಕೇರಿ: ಕಟ್ಟೆಮಾಡು ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಕರಣದ ನಂತರದ ಬೆಳವಣಿಗೆಯಲ್ಲಿ ಸಂಘಟನೆಯೊಂದರ ಮುಖಂಡರು ಪ್ರಚೋದಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆರೋಪಿಸಿ ಕೊಡಗು ಗೌಡ ಯುವ ವೇದಿಕೆಯ ಸದಸ್ಯರು ಮತ್ತು ವೇದಿಕೆಯ ಕಾನೂನು ಸಮಿತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲಾಯಿತು.

ಪೊನ್ನಂಪೇಟೆಯಲ್ಲಿ ಸಂಘಟನೆಯೊಂದರ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಅರೆಭಾಷಿಕ ಗೌಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳಿದ್ದಾರೆ. ಒಕ್ಕಲಿಗರ ನೂರಾರು ಉಪಗುಂಪುಗಳಲ್ಲಿ ಅರೆಭಾಷಿಕ ಗೌಡರು ಕೂಡ ಸೇರಿದವರು. ಆದರೆ, ಮಾಧ್ಯಮದಲ್ಲಿ ಸಂಘಟನೆಯ ಪ್ರಮುಖರು ಇವರು ಗೌಡರೇ ಅಲ್ಲ, ಆಂದ್ರದಿಂದ ಬಂದವರು ಎನ್ನುವ ಬಾಲಿಶ ಮಾತುಗಳನ್ನು ಹೇಳಿರುತ್ತಾರೆ. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿರುತ್ತಾರೆ. ಈ ಮೂಲಕ ಒಕ್ಕಲಿಗರ ಉಪಗುಂಪುಗಳ ನಡುವೆ ಒಡಕುಂಟು ಮಾಡಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿ, ಕೊಡಗಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಹರಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾನೂನು ಸಮಿತಿಯ ವಕೀಲ ಕೊಂಬಾರನ ರೋಷನ್ ಮತ್ತು ಸದಸ್ಯರು, ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್, ನಿಕಟಪೂರ್ವ ಅಧ್ಯಕ್ಷ ಪೈಕೇರ ಮನೋಹರ್, ಕಾರ್ಯದರ್ಶಿ ಪುದಿನೆರವನ ರಿಶಿತ್, ಸಹಕಾರ್ಯದರ್ಶಿ ಕೆದಂಬಾಡಿ ಕಾಂಚನ, ನಿರ್ದೇಶಕರಾದ ಪರಿಚನ ಸತೀಶ್, ನವೀನ್ ದೇರಳ, ಕುಕ್ಕೇರ ಲಕ್ಷ್ಮಣ್ ಮತ್ತಿತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net