ಫೇಸ್​ಬುಕ್​ನಲ್ಲಿ ಬೆದರಿಕೆ ಸಂದೇಶ ಹಾಕಿದ್ದಕ್ಕೆ ದೂರು

Crime Logo
Published on

ಗೋಕರ್ಣ: ರಾಜಕೀಯ ಪಕ್ಷಗಳ ಮುಖಂಡರಿಗೆ ಅವಮಾನಿಸುವ ಹಾಗೂ ಬೆದರಿಕೆ ಹಾಕುವ ಸಂದೇಶವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ ಬಗ್ಗೆ ವ್ಯಕ್ತಿಯೋರ್ವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಪರವಾಗಿ ದೂರೊಂದನ್ನು ಸ್ಥಳೀಯ ಪೊಲೀಸರು ಗುರುವಾರ ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ರಾಮಚಂದ್ರ ಸುಬ್ರಾಯ ನಿರ್ವಾಣೇಶ್ವರ ಎನ್ನುವವರ ವಿರುದ್ಧ ಈ ಬಗ್ಗೆ ಪ್ರಕರಣ ಕೈಗೊಳ್ಳಲಾಗಿದೆ.

ಆರೋಪಿತರು ಫೇಸ್​ಬುಕ್ ಖಾತೆಯಲ್ಲಿ ‘ರಾಜ್ಯದ ಖರ್ಗೆ ಭಾವ ಮತ್ತು ದಿಲ್ಲಿ ರಾಜಕುಮಾರ ರಾಗಾ ಹಾಗೂ ಹೈದರಾಬಾದ್ ಡಾನ್ ಓವೈಸಿ ಮನೆಯ ಮೇಲೂ ಒಂದೊಂದು ಬಾಂಬ್ ಹಾಕಿ ಬಿಟ್ಟಿದ್ದರೆ, ಮುಂದೆಂದೂ ಈ ದೇಶದಲ್ಲಿ ಈ ರೀತಿ ಬಾಲ ಬಿಚ್ಚುವ ದರಿದ್ರ ಕೆಲಸ ಯಾವನೂ ಮಾಡುತ್ತಿರಲಿಲ್ಲ’ ಎಂಬ ಬರಹವನ್ನು ಆಂತರಿಕವಾಗಿ ಗಲಭೆ ಉಂಟು ಮಾಡುವ ದುರುದ್ದೇಶದಿಂದ ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧ ಜನರಲ್ಲಿ ದ್ವೇಷ ಭಾವನೆ ಉಂಟು ಮಾಡುವಂತಹ ಪ್ರಚೋದನಾಕಾರಿಯಾದ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ ಎಂದು ದೂರಿನ ಸಾರಾಂಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net