ಮೈಸೂರು: ಕುರುಬ ಹಾಗೂ ನಾಯಕ ಸಮಾಜದ ನಡುವೆ ಬಿರುಕು ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಟಿ.ಎಸ್.ಶ್ರೀವತ್ಸ ವಿರುದ್ಧ ಕುರುಬ ಸಮುದಾಯದ ಮುಖಂಡ ಕುರುಬಾರಹಳ್ಳಿ ಜಿ.ಹೇಮಂತ್‌ಕುಮಾರ್ ಕೃಷ್ಣರಾಜ ಠಾಣೆಗೆ ದೂರು ನೀಡಿದ್ದಾರೆ.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಕುರುಬ ಸಮಾಜ ಮತ್ತು ನಾಯಕ ಸಮಾಜದ ಮಧ್ಯೆ ಬಿರುಕು ಸೃಷ್ಟಿಸುವ ದುರುದ್ದೇಶದಿಂದ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದ ಹೇಳಿಕೆಯಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖಂಡರಾದ ಲೋಕೇಶ್‌ಕುಮಾರ್ ಮಾದಾಪುರ, ಕಾಳೇಗೌಡ ಕೇರ್ಗಳ್ಳಿ, ಮೈಸೂರು ಬಸವಣ್ಣ, ಮೋಹನ್ ಸೇವಾದಳ, ರಾಜಪ್ಪ ಜಟ್ಟಿಹುಂಡಿ, ರವಿಶಂಕರ್ ಮೂರ್ತಿ ಇತರರು ಇದ್ದರು.