

ರಾಣೆಬೆನ್ನೂರ: ಇಲ್ಲಿಯ ಸಂಗಮ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಶ್ವ ಹಿಂದು ಪರಿಷತ್, ಭಜರಂಗದಳದ ಗಣಪತಿ ವಿಸರ್ಜನೆ ಸಮಯದಲ್ಲಿ ಡಿಜೆ ಹಚ್ಚಿದ ಆರೋಪದಡಿ ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಗಣೇಶ ಮಂಡಳಿ ಅಧ್ಯಕ್ಷ ಅಜಯ ಮಠದ, ಬೆಳಗಾವಿಯ ಎಸ್.ಕೆ. ಗಾಡಿ ಸೌಂಡ್ ಸಿಸ್ಟ್ಂ ಮಾಲೀಕ ಸಾಯಿಶ್ ಸಾ, ಬ್ಯಾಡಗಿಯ ಮಂಜುಳಾ ಸೌಂಡ್ ಸಿಸ್ಟಂ ಮಾಲೀಕನ ವಿರುದ್ಧ ದೂರು ದಾಖಲಾಗಿರುವುದು.
ಇವರು ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಹಚ್ಚಿಕೊಂಡು ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.