ದೂರು ದಾಖಲಾಗಿದೆ ಎಂದು ನಂಬಿಸಿ 11.35 ಲಕ್ಷ ರೂ. ವಂಚನೆ

Crime Logo
Published on

ಹಾವೇರಿ: ನಿಮ್ಮ ಮೊಬೈಲ್​ ನಂಬರ್​ ಮೇಲೆ ಎಫ್​ಐಆರ್​ ಆಗಿದೆ ಎಂದು ಹೇಳಿ ಮಹಿಳೆಯೊಬ್ಬರಿಂದ ಬರೋಬ್ಬರಿ 11.35 ಲಕ್ಷ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಕುರಿತು ಸೈಬರ್​ ಕ್ರೆೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಇಂಜಿನಿಯರ್​ ಉದ್ಯೋಗದಲ್ಲಿದ್ದ ಮಹಿಳೆಯೊಬ್ಬರಿಗೆ ಕರೆ ಮಾಡಿರುವ ರಾಹುಲ್​ ಎಂಬ ವ್ಯಕ್ತಿ ತಾನು ಜ್ಯೂನಿಯರ್​ ಟೆಲಿಕಾಮ್​ ಆಪರೇಟರ್​ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ನಂತರ ನಿಮ್ಮ ಫೋನ್​ ಮೇಲೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಎಫ್​ಐಆರ್​ ದಾಖಲಾಗಿದೆ ಎಂದು ಹೇಳಿ ಹೆದರಿಸಿ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net