.2 ಕೋಟಿ ರೂ.ಮೌಲ್ಯದ ಅಡಕೆ ಸಹಿತ ಪರಾರಿ

Areca nut godown
Published on

ಮಂಗಳೂರು: ನಗರದಿಂದ ಗುಜರಾತಿನ ರಾಜ್‌ಕೋಟ್‌ಗೆ ಲಾರಿಯಲ್ಲಿ ಕಳುಹಿಸಿದ್ದ ಸುಮಾರು 2 ಕೋಟಿ ರೂ. ಮೌಲ್ಯದ ಅಡಕೆ ಸಹಿತ ನಾಲ್ವರು ಪರಾರಿಯಾಗಿದ್ದಾರೆ. ಲಾರಿ ಚಾಲಕ ಬಾವೇಶ್ ಕೆ.ಷಾ, ಆಶೀಶ್ ಯಾದವ್, ಮಹಾರಾಷ್ಟ್ರ ನಾಸಿಕ್ ಜೋಷಿ ಟ್ರಾನ್ಸ್‌ಪೊರ್ಟ್ ಮಾಲೀಕ ವಿಜಯ್ ಜೋಷಿ ಆರೋಪಿಗಳು.

ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಸಂಸ್ಥೆ ಭಟ್ಕಳ ಸೇರಿದಂತೆ ಹಲವೆಡೆ ಅಡಕೆ ಹಾಗೂ ಇತರ ಕಾಡುತ್ಪತ್ತಿಗಳನ್ನು ಖರೀದಿಸಿ ಹೊರರಾಜ್ಯಕ್ಕೆ ಕಳುಹಿಸುತ್ತಿದೆ. ಜು.19ರಂದು ಬೋಳೂರಿನ ಜಯಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಬುಕಿಂಗ್ ಆಫೀಸ್‌ನಿಂದ ಒಂದು ಲಾರಿ ಗೊತ್ತುಪಡಿಸಿ ಗುಜರಾತಿನ ರಾಜ್‌ಕೋಟ್‌ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಬ್ರಾಂಚ್ ಆಫೀಸಿಗೆ 291 ಚೀಲ ಅಡಕೆ ತುಂಬಿಸಿ ಕಳುಹಿಸಲಾಗಿತ್ತು. ನಂತರ 20ರಂದು ಇನ್ನೊಂದು ಲಾರಿಯಲ್ಲಿ 301 ಚೀಲ ಅಡಕೆ ಕಳುಹಿಸಲಾಗಿತ್ತು. ಈ ಎರಡು ಲಾರಿಗಳು ಜು.24ರಂದು ಗುಜರಾತ್ ಬ್ರಾಂಚ್‌ಗೆ ತಲುಪಬೇಕಾಗಿತ್ತು. ಆದರೆ ಅಲ್ಲಿಗೆ ತಲುಪದೆ ಲಾರಿ ಸಹಿತ ಚಾಲಕರು ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಆ್ ಆಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ಚಾಲಕರು ಮತ್ತು ಟ್ರಾನ್ಸ್‌ಪೋರ್ಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net