

ರಾಣೆಬೆನ್ನೂರ: ನಿಮ್ಮ ಮೇಲೆ ಕಾರಿನ ಕಸ್ಟಮರ್ ದೂರು ನೀಡಿದ್ದು ಅದನ್ನು ಸರಿಪಡಿಸಲು ಓಟಿಪಿ ಹೇಳಿ ಎಂದು ಬಿಎಂಟಿಸಿ ಚಾಲಕನ ಖಾತೆಯಿಂದ ಬರೋಬ್ಬರಿ 4.50 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಕುರಿತು ಹಾವೇರಿ ಸೈಬರ್ ಕೆಂ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ಹಾಗೂ ಬಿಎಂಟಿಸಿ ಚಾಲಕ ಚಿರಂಜೀವಿ ನಾಗರಾಜ ಪವಾರ (29) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾನು ಟ್ರಾವೇಲ್ಸ್ ಕಂಪನಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಕಾರಿನ್ ಮೇಲೆ ಕಸ್ಟಮರ್ ಎಂಪ್ಲಾಯಿ ಕಂಪ್ಲೇಟ್ ಇದೆ. ಅದನ್ನು ಸರಿಪಡಿಸಲು ನಿಮಗೆ ಬಂದಿರುವ ಓಟಿಪಿ ಹೇಳಿ ಎಂದಿದ್ದಾನೆ. ಚಿರಂಜೀವಿ ಇದನ್ನು ನಂಬಿ ಒಟಿಪಿ ಹೇಳುತ್ತಿದ್ದಂತೆ ಅವರ ಖಾತೆಯಲ್ಲಿದ್ದ 4.50 ಲಕ್ಷ ರೂ. ಬೇರೆ ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.