ಹಲ್ಲೆ ಆರೋಪದ ಮೇಲೆ ಐವರ ವಿರುದ್ಧ ದೂರು

FIR-2
Published on


ಕೊಡಗು : ಚೆತ್ತುಕಲ್ಲು (ಕೆಂಪು ಇಟ್ಟಿಗೆಕಲ್ಲು) ಸಾಗಿಸುವ ಲಾರಿಯನ್ನು ತಡೆದು ಚಾಲಕ ಹಾಗೂ ಸಹಾಯಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇರಳ ರಾಜ್ಯದ ಇರಿಟ್ಟಿಯ ರಫಿ ಹಾಗೂ ಕಿತೋರಾಂ ಎಂಬುವರು, ಜಿಲ್ಲೆಯ ರಾಬಿನ್, ದೀಪು, ಪ್ರೀತಂ, ಹರೀಶ್ ಚಂಗಪ್ಪ ಹಾಗೂ ಚುಮ್ಮ ರಾಕೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ಚೆತ್ತುಕಲ್ಲನ್ನು ಗೋಣಿಕೊಪ್ಪಲಿನಲ್ಲಿ ಇಳಿಸಿ ಹಿಂದಿರುಗಿ ಕೇರಳಕ್ಕೆ ಹೋಗುವಾಗ ಸಮೀಪದ ಬಿಟ್ಟಂಗಾಲ ಜಂಕ್ಷನ್‌ನಲ್ಲಿ ವಾಹನವೊಂದರಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿ ತಡೆದ ಈ ಐವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net