

ಮಂಗಳೂರು: ಇಲ್ಲಿನ ಬಂದರಿನಿಂದ ಮಹಾರಾಷ್ಟ್ರಕ್ಕೆ 28 ಲಕ್ಷ ರೂಪಾಯಿ ಮೌಲ್ಯದ 25.586 ಮೆಟ್ರಿಕ್ ಟನ್ ಗೋಡಂಬಿ ಪೂರೈಕೆ ಮಾಡದೆ ವಂಚಿಸಲಾಗಿದೆ ಎಂದು ರಮಾಕಾಂತ್ ವಸಂತ ಎಂಬುವರು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಜುಲೈ 7ರಂದು ಪಶ್ಚಿಮ ಆಫ್ರಿಕಾದಿಂದ ಬಂದರಿಗೆ ಕಚ್ಚಾ ಗೋಡಂಬಿ ಬಂದಿತ್ತು. ಅದನ್ನು ಖಾಸಗಿ ಟ್ರಾನ್ಸ್‌ಪೋರ್ಟ್ ಮೂಲಕ ಜುಲೈ 25ರಂದು ಲಾರಿಯಲ್ಲಿ ತುಂಬಿಸಿ ಮಹಾರಾಷ್ಟ್ರದ ಸಿಂದುದುರ್ಗ ಜಿಲ್ಲೆಗೆ 27ರಂದು ತಲುಪಿಸಬೇಕಾಗಿತ್ತು.
ಆದರೆ ಗೋಡಂಬಿ ತಲುಪಿಸದೆ ವಂಚಿಸಲಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.