ಕರ್ತವ್ಯನಿರತ ಪೊಲೀಸನ ಮೇಲೆ ಹಲ್ಲೆ ೯ ಜನರ ವಿರುದ್ಧ ದೂರು ದಾಖಲು

Crime Logo
Published on

ಧಾರವಾಡ: ಕರ್ತವ್ಯನಿರತ ಪೊಲೀಸರ ಮೇಲೆ ೯ ಜನರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಚಂದನಮಟ್ಟಿ ಗ್ರಾಮದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಕೆಲವರು ರಸ್ತೆ ಬಂದ್ ಮÁಡಿದ್ದರು. ಸ್ಥಳಕ್ಕೆ ಹೋದ ಗ್ರಾಮೀಣ ಠಾಣೆ ಪೊಲೀಸ್ ಚಿದಾನಂದ ಅಬ್ಬಿಗೇರಿ ಎಂಬುವರು ರಸ್ತೆ ಬಂದ್ ಮÁಡಬಾರದು ಎಂದು ತಿಳಿಸಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗುಂಪು ಸಿಬ್ಬಂದಿ ಚಿದಾನಂದ ಮೇಲೆ ಹಲ್ಲೆ ನಡೆಸಿ ಅವರ ಬೈಕ್ ಅನ್ನು ಚರಂಡಿಯಲ್ಲಿ ಬಿಸಾಕಿದೆ.
ಈ ಪೈಕಿ ಶಂಕರ ಮೊರಬದ, ಶಿವರಾಜ ಮೊರಬದ, ನಾಗರಾಜ ಮೊರಬದ, ಹರೀಶ ಮುದಕಾಯಿ, ಸಹದೇವ ಚಿನ್ನಣ್ಣವರ, ಮಹಾಂತೇಶ ಕುಡೇಕರ, ಗಿರೀಶ ದೇಸಾಯಿ, ರಾಜು ಪಿರೋಜಿ, ಪ್ರಕಾಶ ಹುಲ್ಲಂಬಿ ಎಂಬುವರ ವಿರುದ್ಧ ಚಿದಾನಂದ ಅವರು ಗ್ರಾಮೀಣ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net