

ಹುಬ್ಬಳ್ಳಿ: ಸಕಾರಣವಿಲ್ಲದೇ ಶ್ರೀರಾಮ ಸೇನೆಯ ಕೆಲವರ ೇಸ್‌ಬುಕ್ ಖಾತೆಗಳನ್ನು ಬ್ಲಾಕ್ ಮಾಡಿದ್ದು, ಕೂಡಲೇ ಸಕ್ರಿಯಗೊಳಿಸಬೇಕು. ಇಲ್ಲವಾದರಲ್ಲಿ ಕೋರ್ಟ್ ಮೊರೆ ಹೋಗಲಾಗುವುದು ಎಂಬ ಎಚ್ಚರಿಕೆಯ ದೂರನ್ನು ಶ್ರೀರಾಮ ಸೇನೆಯ ಪದಾಕಾರಿಗಳು, ಶನಿವಾರ ಇಲ್ಲಿಯ ಸೈಬರ್ ಪೊಲೀಸ್ ಠಾಣೆ ಅಕಾರಿಗಳಿಗೆ ನೀಡಿದರು.
ನಮ್ಮ ಸೇನೆಯ ಪದಾಕಾರಿಗಳು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ೇಸ್‌ಬುಕ್ ಖಾತೆ ಬಂದ್ ಮಾಡಿದವರು ಯಾರೆಂಬುದನ್ನು ತನಿಖೆ ನಡೆಸಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವಿನಾಕಾರಣ ತೊಂದರೆ ಕೊಡುತ್ತಿರುವವರ ವಿರುದ್ಧವೂ ಕ್ರಮ ಜರುಗಿಸಬೇಕು. ಬ್ಲಾಕ್ ಆಗಿರುವ ಖಾತೆ ಸಕ್ರಿಯಗೊಳಿಸಬೇಕು. ತಾವು ಕೈಗೊಂಡ ಕ್ರಮದ ಬಗ್ಗೆಯೂ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಕಾನೂನು ಮೊರೆ ಹೋಗಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ಅವರಿಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.
ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ ಇತರರಿದ್ದರು.