ವಿನಯ್ ಆತ್ಮಹತ್ಯೆ ಪ್ರಕರಣ: ಮತ್ತೊಂದು ದೂರು

complaint
Published on

ಮಡಿಕೇರಿ:

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೊಡಗು ಮೂಲದ ಬಿಜೆಪಿ ಬೆಂಬಲಿಗ ವಿನಯ್ ಸಹೋದರ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯಲ್ಲಿ ಮಂಗಳವಾರ ಮತ್ತೊಂದು ದೂರು ನೀಡಲಾಗಿದೆ. ವಿನಯ್ ಸಹೋದರ ಜೀವನ್ ಜೊತೆ ಎಸ್ಪಿ ಭೇಟಿ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದ ಬಿಜೆಪಿ ನಿಯೋಗ, 107 ಸೆಕ್ಷನ್ ಹಾಕಿದ್ದೇವೆ ಎಂದು ವಿನಯ್‌ಗೆ ಪದೇ ಪದೇ ಕರೆ ಮಾಡಿದ ವ್ಯಕ್ತಿಯ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿ ದೂರು ಸಲ್ಲಿಸಿದೆ. ಇದಕ್ಕೆ ಸಂಬAಧಿಸಿದAತೆ ಕರೆ ಬಂದಿದ್ದ ಫೋನ್ ಸಂಖ್ಯೆ ಮತ್ತು ಇತರ ದಾಖಲಾತಿಗಳನ್ನು ಎಸ್‌ಪಿ ಕೆ. ರಾಮರಾಜನ್ ಅವರಿಗೆ ಬಿಜೆಪಿ ನಿಯೋಗ ನೀಡಿದೆ. ಮಾ.21 ರಂದು ಬೆಳಗ್ಗೆ 10.09 ಗಂಟೆಗೆ ವಿನಯ್‌ಗೆ ಈ ಕರೆ ಬಂದಿತ್ತು. 2.45 ನಿಮಿಷ ವಿನಯ್ ಸೋಮಯ್ಯ ಜತೆ ಆ ವ್ಯಕ್ತಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಸುದ್ದಿಗಾರರ ಜತೆ ಮಾತನಾಡಿದ ಪ್ರತಾಪ್ ಸಿಂಹ, ವಿನಯ್ ಆತ್ಮಹತ್ಯೆ ಮಾಡಿಕೊಂಡು ನಾಲ್ಕು ದಿನಗಳಾಯ್ತು. ಆದರೂ ಈವರೆಗೆ ಯಾರೊಬ್ಬರ ಬಂಧನ ಆಗಿಲ್ಲ. ವಿನಯ್ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದ ಕಾಂಗ್ರೆಸ್ ಮುಖಂಡ ಜಿಲ್ಲೆಯ ಶಾಸಕರೊಬ್ಬರ ಮನೆಯಲ್ಲಿ ಅವಿತಿರುವ ಸಾಧ್ಯತೆ ಇದ್ದು, ಪೊಲೀಸರು ಮೊದಲು ಅವರ ಮನೆ ತಪಾಸಣೆ ಮಾಡಬೇಕು. ವಿನಯ್ ಸೋಮಯ್ಯ ತನಗೆ ಗೊತ್ತಿಲ್ಲ ಎಂದು ವಿನಯ್ ತನ್ನ ಡೆತ್ ನೋಟ್‌ನಲ್ಲಿ ಹೆಸರಿಸಿರುವ ಶಾಸಕ ಹೇಳಿದ್ದಾರೆ. ಆದರೆ ಅವರು ಕಾವೇರಿ ತಾಯಿ ಇಗ್ಗುತಪ್ಪ ಮನಸ್ಸಿನಲ್ಲಿಟ್ಟು ವಿನಯ್ ಸೋಮಯ್ಯ ಗೊತ್ತಿಲ್ಲಾ ಎಂದು ಹೇಳುತ್ತಾರಾ ಎಂದು ಸವಾಲು ಹಾಕಿದರು.

ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಾಜಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net