ಪಾಲಿಕೆ ಕಾರ್ಯವೈಖರಿಗೆ ಬೇಸತ್ತು ಲೋಕಾಯುಕ್ತಕ್ಕೆ ದೂರು, ಅಷ್ಟಕ್ಕೂ ಸಮಸ್ಯೆ ಏನು ಗೊತ್ತಾ?

BAVAR GALLI
ವಿಜಯಪುರದ ಗವರ್ ಗಲ್ಲಿಯ ನಿವಾಸಿ ಮನೆ ಎದುರು ಸಂಗ್ರಹಗೊಂಡ ಕಲುಷಿತ ನೀರು.
Published on

ವಿಜಯಪುರ: ನಗರದ ವಾರ್ಡ್ ನಂ.33ರ ಜೋರಾಪುರ ಪೇಠನ ಗವರ್ ಗಲ್ಲಿಯಲ್ಲಿ ಕಲುಷಿತ ನೀರು ಸಂಗ್ರಹಗೊಂಡು ಕಾಯಿಲೆಗಳು ಹೆಚ್ಚಾಗುತ್ತಿದ್ದರೂ ಕ್ರಮಕ್ಕೆ ಮುಂದಾಗದ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯ ನಿವಾಸಿಯೋರ್ವ ಲೋಕಾಯುಕ್ತಗೆ ದೂರು ನೀಡಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ. ಇದರಿಂದ ಬೇಸತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದಾಗಿ ಸ್ಥಳೀಯ ನಿವಾಸಿ ಎಚ್.ಜಿ. ರಜಪೂತ ತಿಳಿಸಿದ್ದಾರೆ.

ರಜಪೂತ ಅವರ ಮನೆ ಮುಂದೆ ಒಂದು ತಗ್ಗು ಬಿದ್ದಿದ್ದು, ಅದರಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. ಪಾದಚಾರಿಗಳು ಕಾಲು ಜಾರಿ ಬೀಳುತ್ತಿದ್ದಾರೆ. ಅಲ್ಲದೇ, ವಾಹನಗಳು ಸಂಚರಿಸಿದಾಗ ಕಲುಷಿತ ನೀರು ಮನೆಯೊಳಗೆ ಚಿಮ್ಮುತ್ತಿದೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net