ಕಡಿಮೆ ಪಡಿತರ ವಿತರಿಸಿದರೆ ದೂರು ಕೊಡಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೂಚನೆ

Rationrice
ಸಾಂದರ್ಭಿಕ ಚಿತ್ರ
Published on

ಮಂಡ್ಯ: ಜೂನ್ ಮಾಹೆಯಲ್ಲಿ ಅಂತ್ಯೋದಯದ 1 ರಿಂದ 3 ಘಟಕದವರೆಗೆ 21 ಕೆ.ಜಿ, 4 ಸದಸ್ಯರಿಗೆ 26 ಕೆ.ಜಿ, 5 ಸದಸ್ಯರಿಗೆ 36 ಕೆ.ಜಿ, 6 ಸದಸ್ಯರಿಗೆ 46 ಕೆ.ಜಿ, 7 ಸದಸ್ಯರಿಗೆ 56 ಕೆ.ಜಿ, 8 ಸದಸ್ಯರಿಗೆ 66 ಕೆ.ಜಿ ಅಕ್ಕಿ ಹಾಗೂ 14 ಕೆ.ಜಿ ರಾಗಿಯನ್ನು ಉಚಿತವಾಗಿ ನೀಡಲಾಗುವುದು. ಆದ್ಯತಾ ಪಡಿತರ ಚೀಟಿಯ ಪ್ರತಿ ಘಟಕಕ್ಕೆ 8 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ರಾಗಿ ಉಚಿತವಾಗಿ ನೀಡಲಾಗುವುದು. ರಾಜ್ಯ ವ್ಯಾಪ್ತಿಯ ಆದ್ಯತಾ ಪಡಿತರ ಚೀಟಿಯ ಪ್ರತಿ ಘಟಕಕ್ಕೆ 10 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.

ಈ ಹಿನ್ನೆಲೆಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಿಸಲು ಹಣ ಪಡೆದಲ್ಲಿ ಹಾಗೂ ಹಂಚಿಕೆಗೆಗಿಂತ ಕಡಿಮೆ ವಿತರಣೆ ಮಾಡುವುದು ಕಂಡುಬಂದಲ್ಲಿ ಸಂಬಂಧಪಟ್ಟ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ತಾಲೂಕು ಕಚೇರಿಗೆ ದೂರು ಕೊಡಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net