ವಿದ್ಯುತ್ ಜಾಲದ ವ್ಯತ್ಯಯ ಗಮನಿಸಿದಲ್ಲಿ ದೂರು ನೀಡಿ

sesk
Published on

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದೆ. ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ ತಕ್ಷಣ ಚಾಮುಂಡೇಶ್ವರ ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಮಾಹಿತಿ ನೀಡುವಂತೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದ್ದು, ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್‌ಆಪ್ ಮೂಲಕ ಪೋಟೋ ಸಂದೇಶವನ್ನು ನೀಡಬಹುದು. ಕೊಡಗು ಜಿಲ್ಲೆಯ(೨೪*೭) ಟೋಲ್ ಪ್ರೀ ಸರ್ವೀಸ್ ಸೆಂಟರ್‌ನ ದೂರವಾಣಿ ಸಂಖ್ಯೆ ೧೯೧೨, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ ೯೪೪೯೫೯೮೬೬೫ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದ್ದಾರೆ.


ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಮಡಿಕೇರಿ, ತಾಳತ್‌ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯಕುಮಾರ್ ೯೪೪೯೫೯೮೬೦೨, ಸಹಾಯಕ ಜೂನಿಯರ್ ಎಂಜಿನಿಯರ್‌ಗಳು ಸಂಪತ್ ಕುಮಾರ್(ಮಡಿಕೇರಿ) ೯೪೪೯೫೯೮೬೦೩, ಹೇಮಂತ್ ರಾಜ್(ತಾಳತ್ ಮನೆ) ೯೪೪೯೫೯೮೬೦೪, ತೇಜ(ಮೂರ್ನಾಡು) ೯೪೪೯೫೯೮೬೦೫, ಅನಿಲ್ ಕುಮಾರ್(ಸಂಪಾಜೆ) ೯೪೪೮೯೯೪೮೫೧, ಹರಿಣಾಕ್ಷಿ(ಭಾಗಮಂಡಲ) ೯೪೮೦೮೧೦೩೪೪, ಹರೀಶ್(ನಾಪೋಕ್ಲು) ೯೪೪೯೫೯೮೬೦೬ ಹಾಗೂ ಗ್ರಾಹಕರ ಸೇವಾ ಕೇಂದ್ರ ೦೮೨೭೨-೨೪೮೪೫೪, ೯೪೪೯೫೯೮೬೬೫ ಸಂಪರ್ಕಿಸಬಹುದು.


ಕುಶಾಲನಗರ ತಾಲೂಕಿಗೆ ಸಂಬಂಧಿಸಿದಂತೆ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ೯೪೪೯೫೯೮೫೩೮, ಸಹಾಯಕ/ಜೂನಿಯರ್ ಎಂಜಿನಿಯರ್‌ಗಳು ಲವಕುಮಾರ(ಸುಂಟಿಕೊಪ್ಪ) ೯೪೪೯೫೯೮೬೧೫, ವಿನೋದ್ ಕನ್ನ(ಕುಶಾಲನಗರ) ೯೪೪೯೫೯೮೫೮೯, ರಾಣಿ(ಕೂಡಿಗೆ ಶಾಖೆ) ೯೪೪೯೫೯೮೬೧೩, ರುಕ್ಮುಂಗದಕುಮಾರ್(ಮಾದಾಪುರ) ೯೪೪೯೫೯೮೫೮೮, ಎಚ್.ಕೆ.ಪ್ರದೀಪ್(ಚೆಟ್ಟಳ್ಳಿ ಶಾಖೆ) ೯೪೪೮೪೯೯೯೬೫, ಗ್ರಾಹಕರ ಸೇವಾ ಕೇಂದ್ರ ೦೮೨೭೬-೨೭೧೦೪೬ ಸಂಪರ್ಕಿಸಬಹುದು.


ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ ಶಾಖೆಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ೯೪೪೯೫೯೮೬೧೨, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ರವಿಕುಮಾರ್(ಸೋಮವಾರಪೇಟೆ) ೯೪೪೯೫೯೮೬೧೪, ಸುದೀಪ್ ಕುಮಾರ್(ಶನಿವಾರಸಂತೆ) ೯೪೪೯೫೯೮೬೧೬, ಪ್ರಕಾಶ್(ಕೊಡ್ಲಿಪೇಟೆ) ೯೪೪೯೫೯೮೬೧೭, ಮನುಕುಮಾರ್(ಆಲೂರು ಸಿದ್ದಾಪುರ) ೯೪೪೯೫೯೮೬೨೨, ವಿಜಯಕುಮಾರ್(ಶಾಂತಳ್ಳಿ) ೯೪೮೦೮೩೭೫೦೯, ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪ ಸಂಪರ್ಕಿಸಬಹುದು.


ವಿರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ ಶಾಖೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ೯೪೮೦೮೩೭೫೪೫, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ಅಭಿಷೇಕ್(ವಿರಾಜಪೇಟೆ) ೯೪೪೯೫೯೮೬೧೦, ಎಚ್.ಜಿ.ಮನುಕುಮಾರ್(ಅಮ್ಮತ್ತಿ) ೯೪೪೮೯೯೪೩೪೪, ಸ್ವರಾಗ್(ಸಿದ್ದಾಪುರ) ೯೪೪೯೫೯೮೬೧೧, ದೇವಯ್ಯ(ಪಾಲಿಬೆಟ್ಟ) ೯೪೪೮೯೯೪೩೪೧ ಮತ್ತು ಗ್ರಾಹಕರ ಸೇವಾ ಕೇಂದ್ರ ೯೪೪೮೨೮೯೪೧೦ ಸಂಪರ್ಕಿಸಬಹುದು.


ಪೊನ್ನಂಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಮತ್ತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿವೇಕನಂದ ಪೊನ್ನಪ್ಪ ೯೪೪೯೫೯೮೬೦೭, ಹೇಮಂತ್ ಕುಮಾರ್(ಗೋಣಿಕೊಪ್ಪಲು) ೯೪೪೯೫೯೮೬೦೮, ನಾಗೇಂದ್ರ ಪ್ರಸಾದ್(ಶ್ರೀಮಂಗಲ) ೯೪೪೯೫೯೮೬೦೯, ರಂಗಸ್ವಾಮಿ(ಬಾಳಲೆ) ೯೪೪೯೫೯೭೪೮೪ ಹಾಗೂ ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಎಸ್.ಅನಿತಾಬಾಯಿ ೯೪೪೯೫೯೮೬೦೧ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net