

ಬೆಂಗಳೂರು: ನಗರದಲ್ಲಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭ, ಯಡಿಯೂರು ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ವಿವಿಧ ರಸ್ತೆಗಳು, ವೃತ್ತಗಳಿಗೆ ಮರುನಾಮಕರಣ ಸೇರಿ ಹಲವು ನಿರ್ಣಯಗಳಿಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಸರ್ವಾನುಮತದ ಒಪ್ಪಿಗೆ ಸೂಚಿಸಲಾಗಿದೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮೇಯರ್ ಗೌತಮ್ುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯ ಕಲ್ಯಾಣ ವಿಭಾಗದಿಂದ 5 ಕೋಟಿ ರೂ. ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಲು ನಿರ್ಣಯಿಸಲಾಯಿತು. ಈ ಕೇಂದ್ರದಲ್ಲಿ ಪ್ರತಿವರ್ಷ 72 ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶ ಇದೆ. ಪ್ರತಿ ವಿದ್ಯಾರ್ಥಿಗೆ 1.97 ಲಕ್ಷ ರೂ. ವೆಚ್ಚವಾಗಲಿದ್ದು, ಗುಣಮಟ್ಟದ ತರಬೇತಿ ದೊರೆಯಲಿದೆ.
ಶಾಂತಲಾ ದೋಣಿ ವಿಹಾರ ಕೇಂದ್ರಕ್ಕೆ ಗುತ್ತಿಗೆ: ಯಡಿಯೂರು ವಾರ್ಡ್ನ ಯಡಿಯೂರು ಕೆರೆಯಲ್ಲಿ ಶಾಂತಲಾ ದೋಣಿ ವಿಹಾರ ಕೇಂದ್ರದಲ್ಲಿ ಪೆಡಲ್ ಬೋಟ್ ಒಳಗೊಂಡ ಬೋಟಿಂಗ್ ನಡೆಸಲು 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ರಸ್ತೆಗಳಿಗೆ ಮರುನಾಮಕರಣ: ಮತ್ತಿಕೆರೆ ವ್ಯಾಪ್ತಿಯ ಕೆಂಪೇಗೌಡ ವೃತ್ತದಿಂದ ನ್ಯೂ ಬಿಇಎಲ್ ರಸ್ತೆವರೆಗೆ ‘ನಾಡಪ್ರಭು ಕೆಂಪೇಗೌಡ ರಸ್ತೆ’, ಎಚ್ಎಎಲ್ ವೃತ್ತದ ಬಳಿ ನಿರ್ವಿುಸಲಾಗಿರುವ ಕೆಳರಸ್ತೆಗೆ ಎಚ್ಎಎಲ್ ಸಂಸ್ಥಾಪಕ ‘ಸೇಠ್ ವಾಲ್ಚಂದ್ ಹೀರಾಚಂದ್ ರಸ್ತೆ’, ಕೋನೇನ ಅಗ್ರಹಾರದ ಕೋಡಿಹಳ್ಳಿಯ ಕಾಪೋರೇಷನ್ ಕ್ವಾಟರ್Åರ್ಸ್ ರಸ್ತೆಗೆ ‘ದಿ. ಶ್ರೀ ಪೆಂಚಲಸ್ವಾಮಿ ರಸ್ತೆ, ಸುಬ್ರಹ್ಮಣ್ಯ ನಗರದ 7ನೇ ಮುಖ್ಯರಸ್ತೆಯಿಂದ ಎ- ಬ್ಲಾಕ್ ರಸ್ತೆವರೆಗೆ ‘ಶ್ರೀ ಪದ್ಮಾನಂದ ಗುರೂಜಿ ರಸ್ತೆ’, ವಸಂತನಗರದ 11ನೇ ಮುಖ್ಯರಸ್ತೆಗೆ ‘ಶ್ರೀ ಮುನೇಶ್ವರ ದೇವಸ್ಥಾನ ರಸ್ತೆ’ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ರಮೀಳಾ ಸ್ಮಾರಕ ಹೆರಿಗೆ ಆಸ್ಪತ್ರೆ: ಕಾವೇರಿಪುರ ವ್ಯಾಪ್ತಿಯಲ್ಲಿ ಬಿಡಿಎ ನಿರ್ವಿುಸಿರುವ ಬಡಾವಣೆಯ 1ನೇ ಮುಖ್ಯರಸ್ತೆಗೆ ‘ಉಪಮೇಯರ್ ರಮೀಳಾ ಉಮಾಶಂಕರ್ ರಸ್ತೆ’ ಹಾಗೂ ಈ ಬಡಾವಣೆಯ ಹೆರಿಗೆ ಆಸ್ಪತ್ರೆಗೆ ‘ಉಪಮೇಯರ್ ರಮೀಳಾ ಉಮಾಶಂಕರ್ ಸ್ಮಾರಕ ಬಿಬಿಎಂಪಿ ಹೆರಿಗೆ ಆಸ್ಪತ್ರೆ ಎಂದು ನಾಮಕರಣ ಮಾಡಲು ನಿರ್ಣಯಿಸಲಾಯಿತು.
ಪತ್ರಕರ್ತರ ಸಹಕಾರ ಸಂಘಕ್ಕೆ 10 ಲಕ್ಷ ರೂ.: ಕರ್ನಾಟಕ ಪತ್ರಕರ್ತರ ಸಹಕಾರ ಸಂಘ 70ನೇ ವರ್ಷದ ಸಂಭ್ರಮದಲ್ಲಿದೆ. ಇದುವರೆಗೂ ಸಂಘ ಯಾವುದೇ ನೆರವು ಪಡೆದಿಲ್ಲ. ಹಾಗಾಗಿ, ಸಂಘದ 70ನೇ ವರ್ಷದ ಸಂಭ್ರಮಾಚರಣೆಗೆ 10 ಲಕ್ಷ ರೂ. ಅನುದಾನ ನೀಡಲು ತೀರ್ವನಿಸಲಾಯಿತು.
ಗಣ್ಯರ ಪ್ರತಿಮೆಗಳ ನಿರ್ಮಾಣ
ದೊಡ್ಡಬೊಮ್ಮಸಂದ್ರ ವಾರ್ಡ್ನ ಕೆಂಪೇಗೌಡ ಕೆರೆಯ ಮುಖ್ಯದ್ವಾರದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮತ್ತು ಇದೇ ವಾರ್ಡ್ನ ಇಂದಿರಾ ಕ್ಯಾಂಟೀನ್ ಬಳಿಯ ಖಾಲಿ ಜಾಗದಲ್ಲಿ ಡಾ. ರಾಜ್ಕುಮಾರ್ ಪ್ರತಿಮೆ ನಿರ್ವಿುಸಲು ನಿರ್ಧರಿಸಲಾ ಗಿದೆ. ನಾಗಶೆಟ್ಟಿಹಳ್ಳಿ ಬಸವೇಶ್ವರ ವೃತ್ತದ ಬಳಿ ಬಸವೇಶ್ವರ ಪ್ರತಿಮೆ, ದೊಡ್ಡಬೊಮ್ಮಸಂದ್ರದ ನಂಜಪ್ಪ ವೃತ್ತದ ಬಳಿ ದಿ. ನಂಜಪ್ಪ ಪ್ರತಿಮೆ ಹಾಗೂ ರಾಧಾಕೃಷ್ಣ ದೇವಾಲಯ ವಾರ್ಡ್ನ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿ ಡಾ. ರಾಜ್ಕುಮಾರ್ ಕಂಚಿನ ಪುತ್ಥಳಿ ಸ್ಥಾಪಿಸಲು ನಿರ್ಣಯಿಸಲಾಯಿತು.
ಮಾರುಕಟ್ಟೆಯಲ್ಲಿ ಕೃಷ್ಣರಾಜರ ಪ್ರತಿಮೆ
ಕೆ.ಆರ್. ಮಾರುಕಟ್ಟೆ ನಿರ್ವಣಕ್ಕೆ ಸ್ಥಳ ನೀಡಿರುವ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಕಂಚಿನ ಪ್ರತಿಮೆಯನ್ನು ಕೆ.ಆರ್. ಮಾರುಕಟ್ಟೆ ಪೊಲೀಸ್ ಠಾಣೆ ಎದುರು ನಿರ್ವಿುಸಲು ನಿರ್ಣಯ ಕೈಗೊಳ್ಳಲಾಯಿತು. ವಂದೇ ಮಾತರಂ ಸಮಾಜಸೇವಾ ಸಂಸ್ಥೆ ಇದರ ಸಹಭಾಗಿತ್ವ ವಹಿಸಿಕೊಳ್ಳಲಿದೆ.
ಉದ್ಯಾನಕ್ಕೆ ವಿಶ್ವೇಶತೀರ್ಥರ ಹೆಸರು
ಪದ್ಮನಾಭನಗರದ ಸಮೃದ್ಧಿ ಲೇಔಟ್ನಲ್ಲಿರುವ ಉದ್ಯಾನಕ್ಕೆ ‘ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಉದ್ಯಾನ’, ದೊಮ್ಮಲೂರಿನಲ್ಲಿ ಪಾಲಿಕೆ ನಿರ್ವಿುಸಿರುವ ಬಯಲು ರಂಗಮಂಟಪಕ್ಕೆ ‘ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗ ಮಂಟಪ’ ಮತ್ತು ಕುಮಾರಸ್ವಾಮಿ ಲೇಔಟ್ನ ಗೋವಿನಾಯಕನಹಳ್ಳಿ ಕ್ರೀಡಾಂಗಣಕ್ಕೆ ‘ದೀನದಯಾಳ ಉಪಾಧ್ಯಾಯ ಕ್ರೀಡಾಂಗಣ’ ಎಂದು ನಾಮಕರಣ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.