ಸ್ಪರ್ಧಾತ್ಮಕ ಮನೋಭಾವ ಇರಲಿ

7
ಅಂಕಲಿಯಲ್ಲಿರುವ ಬಿಸಿಎ ಪದವಿ ಮಹಾವಿದ್ಯಾಲಯಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜುಮಟ್ಟದ ಸಾಂಸ್ಕೃತಿಕ ಹಬ್ಬವನ್ನು ಪಾರ್ಥಸಾರಥಿ ನಂದಾ ಉದ್ಘಾಟಿಸಿದರು. ಎ.ಕೆ.ಪಾಟೀಲ ಇತರರಿದ್ದರು.
Published on

ಮಾಂಜರಿ: ಸಮೀಪದ ಅಂಕಲಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಕೆಎಲ್‌ಇ ಸಂಸ್ಥೆಯ ಬಿಸಿಎ ಪದವಿ ಮಹಾವಿದ್ಯಾಲಯದಿಂದ ಅಂತರ್ ಕಾಲೇಜುಮಟ್ಟದ ಸಾಂಸ್ಕೃತಿಕ ಹಬ್ಬ ಈಚೆಗೆ ಜರುಗಿತು.

ಬಸವಪ್ರಭು ಕೋರೆ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ಪಾರ್ಥಸಾರಥಿ ನಂದಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಇರಬೇಕು. ಅದು ಮಾನಸಿಕ ಪ್ರಬುದ್ಧತೆ ಜತೆಗೆ ಸಮಾಜದ ಸ್ವಾಸ್ಥೃ ಕಾಪಾಡುತ್ತದೆ ಎಂದು ಹೇಳಿದರು.

ಪ್ರಾಚಾರ್ಯ ಪ್ರೊ.ಎ.ಕೆ. ಪಾಟೀಲ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆ, ಚರ್ಚಾ ಸ್ಪರ್ಧೆ, ೆಟೋಗ್ರಫಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮತ್ತು ಕಾವ್ಯ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು 87 ಸ್ಪರ್ಧಾಳುಗಳು ಭಾಗಿಯಾಗಿದ್ದರು. ಬಿಸಿಎ ಪದವಿ ಮಹಾವಿದ್ಯಾಲಯದ ಸಂಯೋಜಕ ಪ್ರೊ.ಎಂ.ಎಸ್.ಕಾನಡೆ, ಭರತ ಪಾಟೀಲ ಹಾಗೂ ಸ್ಪರ್ಧಾ ಸಂಯೋಜಕ ಪ್ರಸನ್ನ ಕುಂಬಾರ, ಭೂಮಿಕಾ ಪಾಟೀಲ, ಅಶ್ವಿನಿ, ಗಣೇಶ, ಬಸವರಾಜ ವಿಟೇಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net