ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಲಿ

23RBG1
ರಾಯಬಾಗ ತಾಲೂಕಿನ ಬಾವನ ಸೌಂದತ್ತಿಯ ಬಿ.ಎಂ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಸಂಸ್ಥೆ ಉಪಾಧ್ಯಕ್ಷ ಜಿನೇಶ್ವರ ಮಗದುಮ್ಮ ಚಾಲನೆ ನೀಡಿದರು. ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ, ಅಜಿತ ಕಾಮಗೌಡ, ಬಾಬು ಜನಾಜ, ಅರಿಹಂತ ಕಾಮಗೌಡ ಇತರರಿದ್ದರು.
Published on

ರಾಯಬಾಗ: ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಬೇಕು ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.

ತಾಲೂಕಿನ ಬಾವನ ಸೌಂದತ್ತಿಯ ಬಿ.ಎಂ.ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಜಿನೇಶ್ವರ ಮಗದುಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಎ.ಟಿ.ಕೂಗೆ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಅಜಿತ ಕಾಮಗೌಡ, ಬಾಬು ಜನಾಜ, ಅರಿಹಂತ ಕಾಮಗೌಡ, ಮುಖ್ಯ ಶಿಕ್ಷಕ ಎ.ಕೆ.ಸಲಗರೆ, ಡಿ.ಆರ್.ಭೆಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net