ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ

10 nrp 7
Published on

ಎನ್.ಆರ್.ಪುರ: ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷಾ ಹೇಳಿದರು.
ಕುವೆಂಪು ಕ್ರೀಡಾಂಗಣದಲ್ಲಿ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಮಂಗಳವಾರ ನಡೆದ ಎನ್.ಆರ್.ಪುರ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ,ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ತೀರ್ಪುಗಾರರು ನಿಸ್ಪಪಕ್ಷಪಾತವಾಗಿ ತೀರ್ಪು ನೀಡಬೇಕು ಎಂದು ಹೇಳಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಮಕ್ಕಳು ಭವಿಷ್ಯದ ಕ್ರೀಡಾಪಟುಗಳಾಗಿ ಬೆಳೆಯಲು ವಲಯಮಟ್ಟದ ಕ್ರೀಡಾಕೂಟದ ಮೊದಲ ಮೆಟ್ಟಿಲಾಗಿದೆ. ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಗೆದ್ದು ಮುಂದಿನ ಹಂತಕ್ಕೆ ತಲುಪಲು ಪ್ರಯತ್ನಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದರು.
ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಜಿನಿ, ದಾನಿಗಳಾದ ರಾಬರ್ಟ್, ಮುಖ್ಯಶಿಕ್ಷಕಿ ರಾಜೇಶ್ವರಿ, ಸಹಶಿಕ್ಷಕ ಅಂಜನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭೋಗೇಶಪ್ಪ ಪಾಲ್ಗೊಂಡಿದ್ದರು. 14 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧಾ ವಿಜೇತರು ಬಾಲಕರ ಹಾಗೂ ಬಾಲಕಿಯರ ವಿಭಾಗದ ಕಬ್ಬಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ್ರಥಮ), ಈಚಿಕೆರೆ ಸರ್ಕಾರಿ ಶಾಲೆ (ದ್ವಿತೀಯ), ಬಾಲಕಿಯರ ವಿಭಾಗದ ಕಬ್ಬಡಿ ಕಿತ್ತೂರು ರಾಣಿ ವಸತಿ ಶಾಲೆ (ದ್ವಿತೀಯ), ಬಾಲಕರ ವಿಭಾಗದ ಖೋಖೋ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ್ರಥಮ),ಕರ್ನಾಟಕ ಪಬ್ಲಿಕ್ ಸ್ಕೂಲ್(ದ್ವಿತೀಯ), ಬಾಲಕಿಯರ ವಿಭಾಗ ಖೋ ಖೋ ಮೊರಾರ್ಜಿ ವಸತಿ ಶಾಲೆ (ಪ್ರಥಮ), ಬಸ್ತಿಮಠ ಸರ್ಕಾರಿ ಶಾಲೆ (ದ್ವಿತೀಯ), ಬಾಲಕರ ವಿಭಾಗದ ವಾಲಿಬಾಲ್ ಡಿಸಿಎಂಸಿ (ಪ್ರಥಮ), ಬಸ್ತಿಮಠ ಸರ್ಕಾರಿ ಶಾಲೆ (ದ್ವಿತೀಯ),ಬಾಲಕಿಯ ವಿಭಾಗದ ವಾಲಿಬಾಲ್ ಬಸ್ತಿಮಠ ಸರ್ಕಾರಿ ಶಾಲೆ (ಪ್ರಥಮ),ಕಿತ್ತೂರು ರಾಣಿ ವಸತಿ ಶಾಲೆ (ದ್ವಿತೀಯ), ಬಾಲಕರ ವಿಭಾಗದ ಥ್ರೋಬಾಲ್ ಜೀವನ್ ಜ್ಯೋತಿ (ಪ್ರಥಮ), ಡಿಸಿಎಂಸಿ (ದ್ವಿತೀಯ), ಬಾಲಕಿಯರ ವಿಭಾಗದ ಥ್ರೋಬಾಲ್ ಕಿತ್ತೂರು ರಾಣಿ ಚೆನ್ನಮ್ಮ (ಪ್ರಥಮ), ಜೀವನ್ ಜ್ಯೋತಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net