

ಸಂಬರಗಿ: ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿಜಯವಾಣಿ ಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ಸಂಚಿಕೆಯನ್ನು ಓದಿ ಎಂದು ಗ್ರಾಪಂ ಅಧ್ಯಕ್ಷ ರವಿ ವಾಘ್ಮೋರೆ ಹೇಳಿದರು.
ಸಮೀಪದ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ‘ವಿಜಯವಾಣಿ ವಿದ್ಯಾರ್ಥಿ ಮಿತ್ರ‘ ಸಂಚಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಡಮಕ್ಕಳಿಗೆ ಯಾವುದೇ ಖಾಸಗಿ ತರಬೇತಿ ಪಡೆಯಲು ಅಸಾಧ್ಯ. ಕೇವಲ 1 ರೂಪಾಯಿಯಲ್ಲಿ ‘ವಿಜಯವಾಣಿ ವಿದ್ಯಾರ್ಥಿ ಮಿತ್ರ’ ಪಡೆದುಕೊಂಡು ಅಧ್ಯಯನ ಮಾಡಿ ಪಾಸಾಗಿ ಶಾಲೆಗೆ ಕೀರ್ತಿ ತರಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ಯಶವಂತರಾವ ಪಾಟೀಲ, ಪಿಡಿಒ ಎಸ್.ಎಂ.ರಾಥೋಡ, ಪ್ರೌಢಶಾಲೆ ಮುಖ್ಯಶಿಕ್ಷಕ ಮಹಾವೀರ ಬಿಲ್ ಇತರರು ಇದ್ದರು.