

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ವಲಯ ಹಾಗೂ ಇಂಡಿಯನ್ ಸಿವಿಲ್ ಸರ್ವಿಸಸ್ ಟ್ರೈನಿಂಗ್ ಅಕಾಡೆಮಿ ಸಹಯೋಗದಲ್ಲಿ ಕುವೆಂಪುನಗರದ ಮಂಗಳೂರು ನೀಟ್ ಅಕಾಡೆಮಿ ವತಿಯಿಂದ ಸರ್ಕಾರಿ ನೌಕರರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಆಯೋಜಿಸಲಾಗುತ್ತಿದೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಎಸ್.ರಮೇಶ್ ಗೌಡ ತಿಳಿಸಿದರು.
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ಶೇ.30ರಿಂದ 90ರಷ್ಟು ವಿದ್ಯಾರ್ಥಿ ವೇತನ ನೀಡಲಾಗುವುದು. ತರಬೇತಿಗೂ ಕಡಿಮೆ ಶುಲ್ಕವಿದ್ದು, ಮೈಸೂರು ವಲಯದ ಸರ್ಕಾರಿ ನೌಕರರ ಮಕ್ಕಳು ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 91089 82242 ಸಂಪರ್ಕಿಸಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ವಲಯ ಅಧ್ಯಕ್ಷ ಗೋವಿಂದರಾಜು, ಗೌರವಾಧ್ಯಕ್ಷ ಉಮೇಶ್, ಕಾರ್ಯಧ್ಯಕ್ಷ ಆನಂದ್ ನೀಲ್, ಜಿಲ್ಲೆಯ ಕಾರ್ಯದರ್ಶಿ ರೇವಣ್ಣ ಮತ್ತು ರವಿ ಉಪಸ್ಥಿತರಿದ್ದರು.