

ಮಡಿಕೇರಿ:
ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ ಕಾರ್ಯಕ್ರಮ ಆಯೋಜಿಲಾಗಿದ್ದು ಮಕ್ಕಳಿಗೆ ವೈಯಕ್ತಿಕ ನೃತ್ಯ ಹಾಗೂ ಕಥೆ ಹೇಳುವ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಥೆ ಹೇಳುವ ಸ್ಪರ್ಧೆ ವೈಯಕ್ತಿಕ ಸ್ಪರ್ಧೆಯಾಗಿದ್ದು ೩ರಿಂದ ೬ ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬೇಕು. ಮೂರು ನಿಮಿಷ ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು. ಕಥೆ ಕನ್ನಡದಲ್ಲಿಯೇ ಇರಬೇಕು. ನೃತ್ಯ ಸ್ಪರ್ಧೆಯಲ್ಲಿ ೭ರಿಂದ ೧೨ ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಕನ್ನಡ ಭಕ್ತಿಗೀತೆಗಳಿಗೆ ೩ ನಿಮಿಷದ ಅವಧಿಯೊಳಗೆ ನೃತ್ಯ ಮಾಡಬೇಕು. ಭರತನಾಟ್ಯ ಸ್ಪರ್ಧೆಯಲ್ಲಿ ಚಲನಚಿತ್ರದ ಗೀತೆಗೆ ಭರತನಾಟ್ಯ ಮಾಡುವಂತಿಲ್ಲ, ಭರತನಾಟ್ಯದ ಉಡುಗೆ - ತೊಡುಗೆ ಕಡ್ಡಾಯವಾಗಿದ್ದು, ೩ ನಿಮಿಷದ ಅವಧಿಯಲ್ಲಿರಬೇಕು. ೧೨ ವರ್ಷದಿಂದ ೧೮ ವರ್ಷದ ಮಕ್ಕಳು ಭಾಗವಹಿಸಬಹುದು.
ಎಲ್ಲ ಸ್ಪರ್ಧಿಗಳು ಸ್ಪರ್ಧೆಗಳಿಗೆ ವೀಡಿಯೋಗಳನ್ನು ಕಳುಹಿಸಲು ಕೊನೆಯ ಜೂ.೩೦. ವೀಡಿಯೋ ವಾಟ್ಸಪ್ ಮಾಡಬೇಕಾದ ಸಂಖ್ಯೆ. ಕಥೆ ಹೇಳುವ ಸ್ಪರ್ಧೆ : ೯೩೫೩೭೪೮೯೬೨ ರಜನಿ ನವೀನ್., ನೃತ್ಯ ಸ್ಪರ್ಧೆ : ೯೬೩೨೮೭೦೧೦೨ ಅಖಿಲಾ ಭಟ್., ಭರತನಾಟ್ಯ : ೯೪೮೦೭೮೩೧೫೬ ಉಮಾ ನಾಗರಾಜ್., ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಂಖ್ಯೆ - ೯೬೬೩೧೧೯೬೭೦.
ವಿಜೇತರಿಗೆ ನವೆಂಬರ್ ತಿಂಗಳಲ್ಲಿ ನಡೆಯುವ ಕನ್ನಡ ಹಬ್ಬದ ವೇದಿಕೆಯಲ್ಲಿ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಕ್ಕಳಿಗೆ ವೇದಿಕೆಯಲ್ಲಿ ಪ್ರತಿಭಾ ಅನಾವರಣಕ್ಕೆ ಅವಕಾಶ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.