

ಇಳಕಲ್ಲ(ಗ್ರಾ): ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ದಯಾನಂದ ಸಾವುಕಾರ ಹೇಳಿದರು.
ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸಿಆರ್ ಬಿಸಿಎ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅನ್ವೇಷಣ 2025 ಐಟಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಳು ವಿವಿಧ ಇವೆಂಟ್‌ಗಳನ್ನು ಮಾಡಿ ಬಾಗಲಕೋಟೆ ಜಿಲ್ಲೆಯ ಬಿಸಿಎ ಕಾಲೇಜು ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಆಯೋಜಿಸಿ ಅವರಲ್ಲಿನ ಪ್ರತಿಭೆ ಒರೆಗೆ ಹಚ್ಚುವ ಕೆಲಸ ನಡೆದಿದೆ ಎಂದರು.
ಗುರುಮಹಾಂತ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ನೌಕರಿಗಾಗಿ ಕಾಯದೇ ಉದ್ಯಮ ಸ್ಥಾಪಿಸುವ ಮೂಲಕ ಬೇರೆಯವರಿಗೆ ನೌಕರಿ ನೀಡುವಂತಾಗಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಎಸ್.ಕೆ. ಸಜ್ಜನ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕಾಲೇಜು ಚೇರ್ಮನ್ ರತ್ನಾಕರ ಹೂಲಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಶ್ರೀಕಾಂತ ಮಾರಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಸಂತೋಷ ಬೆಳಗಲ್ ವಂದಿಸಿದರು.