

ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿ ಹೆರವನಾಡು ಗ್ರಾಮದ ಉಡೋತ್ ಮೊಟ್ಟೆಯಲ್ಲಿ ಕೈಲುಮುಹೂರ್ತ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಆಟೋಟ ಸ್ಪರ್ಧೆ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಬಿ.ಎಂ.ಎಲ್ಲಣ್ಣ ಪೂಜಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಪೂಜಾರಿ ನೆರವೇರಿಸಿದರು.
ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಡಾರ್ಕ್ ನೈಟ್ ಕೂರ್ಗ್ ಮಡಿಕೇರಿ ತಂಡ ಪ್ರಥಮ ಬಹುಮಾನ ಪಡೆದರೆ, ಶಾಕ್ ಬಾಯ್ಸ್ ಉಡೋತ್ ದ್ವಿತೀಯ ಬಹುಮಾನ ಪಡೆದುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಲೇಡಿ ಟ್ರಾವೆಲ್ಸ್ ಉಡೋತ್ ಪ್ರಥಮ ಬಹುಮಾನ ಪಡೆದರೆ, ಆದಿಶಕ್ತಿ ಸಂಘ ಉಡೋತ್ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.