ಪ್ರತಿಭೆ ಗುರುತಿಸಲು ಸ್ಪರ್ಧೆ ಸಹಕಾರಿ

FotoJet 23 22
Published on

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಹೇಳಿಕೆ

ಹುಳಿಯಾರು: ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಗಣಪತಿ ಉತ್ಸವಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ತಿಳಿಸಿದರು.

ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 75ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ 10 ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ವಾತನಾಡಿ, ಸ್ಥಳೀಯರ ಭರತನಾಟ್ಯ, ಡ್ಯಾನ್ಸ್, ಜನಪದ ಗೀತೆ ಗಾಯನ ಸ್ಪರ್ಧೆ, ಜನಪದ ನೃತ್ಯ, ಕನ್ನಡ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ, ಆದರ್ಶ ದಂಪತಿಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ಸಂಟಿಸಿ ಸ್ಥಳೀಯರಿಗೆ ಅವಕಾಶ ಕೊಡಲಾಗುತ್ತಿದೆ ಎಂದರು.

ರಾಜ್ಯಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಿ ಸ್ಥಳೀಯ ಭಜನಾ ಕಲಾವಿದರ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 125ಕ್ಕೂ ಹೆಚ್ಚು ಭಜನಾ ತಂಡಗಳನ್ನು ಕರೆಸಿ ನೂರಾರು ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ವಾಡಲಾಗುತ್ತಿದೆ ಎಂದರು.

ಹಿರಿಯ ಭಜನಾ ಕಲಾವಿದೆ ಪ್ರೇಮಕ್ಕ ಹಾಗೂ ಮುಖ್ಯ ಪ್ರಾಣ ಭಜನಾ ಮಂಡಳಿಯ ಹಿರಿಯ ಕಲಾವಿದ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net