ಹಾವೇರಿ ‘ಕಮಲ’ ಸಾರಥ್ಯಕ್ಕೆ ಪೈಪೋಟಿ

BJP
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರರಿಂದ ಒಂದು ಸ್ಥಾನಕ್ಕೆ ಕುಸಿದಿರುವ ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭರ್ಜರಿ ಪೈಪೋಟಿ, ಲಾಬಿ ಶುರುವಾಗಿದೆ. ಇದಕ್ಕಾಗಿ ಹತ್ತಾರು ಮುಖಂಡರು ತೆರೆಮರೆ ಕಸರತ್ತು ನಡೆಸಿದ್ದಾರೆ.

ಆರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ-ಸವಣೂರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಸಿದೆ. ಉಳಿದಂತೆ ಹಾವೇರಿ, ಹಿರೇಕೆರೂರ, ಹಾನಗಲ್ಲ, ರಾಣೆಬೆನ್ನೂರ, ಬ್ಯಾಡಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ, ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಪಕ್ಷವನ್ನು ಮತ್ತೆ ತಳಮಟ್ಟದಿಂದ ಕಟ್ಟಬೇಕಿದೆ. ಸದ್ಯಕ್ಕೆ ಬಿಜೆಪಿ ನಿಯಮಾನುಸಾರವಾಗಿ ಜಿಲ್ಲಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ. ಹಿರಿಯರ ಸಲಹೆ ಪಡೆದು ರಾಜ್ಯಾಧ್ಯಕ್ಷರು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ. ಜಿಲ್ಲಾಧ್ಯಕ್ಷ ಅವ ಮೂರು ವರ್ಷ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿರುವ ಸಿದ್ದರಾಜ ಕಲಕೋಟಿ ಅವರನ್ನೇ ಮುಂದುವರಿಯುವಂತೆ ಪಕ್ಷದಿಂದ ಸೂಚನೆ ಬಂದಿದ್ದು, ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಕಲಕೋಟಿ ಅವರು ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲೆಯ ಹಿರಿಯರಾದ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.

ಈ ನಡುವೆ ಹಲವು ಆಕಾಂಕ್ಷಿಗಳು ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ತಮ್ಮ ಬಯೋಡೇಟಾ ಹಿಡಿದು ಬೆಂಗಳೂರಿಗೆ ಅಲೆಯುತ್ತಿದ್ದಾರೆ. ತಮಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವುದಾಗಿ ಮನವೊಲಿಸುವ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ. ರಾಣೆಬೆನ್ನೂರ ಮಾಜಿ ಶಾಸಕ ಅರುಣಕುಮಾರ ಪೂಜಾರ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಾವೂ ಅರ್ಜಿ ಸಲ್ಲಿಸಿದ್ದು, ವರಿಷ್ಠರು ತಮ್ಮನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನನ್ನು ಮುಖಂಡರು ಹುಡುಕುತ್ತಿದ್ದಾರೆ. ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ, ಭಿನ್ನಮತ, ೇಸ್ ವ್ಯಾಲ್ಯೂ ಇಲ್ಲದವರನ್ನು ಹುಡಿಕಿ ಪಟ್ಟಿಯಿಂದ ಕೈಬಿಡುವ ಕೆಲಸ ನಡೆದಿದೆ.
ಕೆಲವರು ಆಯಾ ಜಾತಿಯ ಮುಖಂಡರೊಂದಿಗೆ ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ. ಈಗಾಗಲೇ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ದೊರೆತಿದೆ. ಈ ಬಾರಿ ಅಹಿಂದ ವರ್ಗಕ್ಕೆ ಕೊಡಬೇಕು ಎಂದು ಒಂದು ತಂಡ ಬೆನ್ನು ಹತ್ತಿದೆ. ಈ ಪೈಪೋಟಿ ನಡುವೆ ಈ ಬಾರಿ ಕಮಲ ಸಾರಥ್ಯ ಹಿರಿಯರಿಗೋ, ಯುವಕರಿಗೋ? ಎಂಬ ಕುತೂಹಲ ಮೂಡಿದೆ.

32 ಅಭ್ಯರ್ಥಿಗಳಿಂದ ಅರ್ಜಿ

ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಕೃಷ್ಣಾ ಈಳಗೇರ, ಜಗದೀಶ ಬಸೇಗೆಣ್ಣಿ, ವೆಂಕಟೇಶ ನಾರಾಯಣಿ, ಪಾಲಾಕ್ಷಗೌಡ ಪಾಟೀಲ, ಕಲ್ಯಾಣಕುಮಾರ ಶೆಟ್ಟರ್, ನಿರಂಜನ ಹೆರೂರ, ಪ್ರಭು ಹಿಟ್ನಳ್ಳಿ ಸೇರಿದಂತೆ 32 ಅಭ್ಯರ್ಥಿಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ವೀಕ್ಷಕರಿಂದ ಸಮೀಕ್ಷೆ

ಮೊನ್ನೆಯಷ್ಟೇ ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಆಗಮಿಸಿದ್ದ ಪಕ್ಷದ ವೀಕ್ಷಕ ನಿರ್ಮಲಕುಮಾರ ಸುರಾನಾ ಹಾಗೂ ಜಿಲ್ಲಾ ಪ್ರಭಾರಿ ಎಲ್.ಎನ್.ಕಲ್ಲೇಶ ಅವರು ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಸಮೀಕ್ಷೆ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು, 9 ಮಂಡಲಗಳ ಅಧ್ಯಕ್ಷರು, ರಾಜ್ಯಮಟ್ಟದ ಪದಾಕಾರಿಗಳು ಸೇರಿದಂತೆ ಪ್ರಮುಖರಿಂದ ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ವಾರದೊಳಗೆ ಘೋಷಣೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ವೀಕ್ಷಕರಿಂದ ವರದಿ ಪಡೆದಿದ್ದಾರೆ. ಈ ವಾರದೊಳಗೆ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಈಗಾಗಲೇ ಒಂದು ಬಾರಿ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆ ವೇಳೆ ಜಿಲ್ಲೆಯಲ್ಲಿ ಆರೂ ವಿಧಾನಸಭೆ ಕ್ಷೇತ್ರದಲ್ಲಿ ಹಾಗೂ ಲೋಕಸಭೆಯಲ್ಲಿ ಬಿಜೆಪಿ ಗೆಲುವು ಸಾಸಿತ್ತು. ಈಗ ಮತ್ತೊಮ್ಮೆ ಅವಕಾಶ ಕೊಟ್ಟರೆ ನಿರ್ವಹಿಸುವೆ. ಬೇರೆಯವರಿಗೆ ಅವಕಾಶ ಕೊಟ್ಟರೆ ಅವರಿಗೆ ಸಹಕಾರ ನೀಡುವೆ.I ಶಿವರಾಜ ಸಜ್ಜನರ, ಮಾಜಿ ಶಾಸಕ ಸಾಮಾನ್ಯ ವರ್ಗ ಅಥವಾ ಹಿರಿಯರಿಗೆ ಪಕ್ಷ ಅವಕಾಶ ಕೊಟ್ಟರೆ ನನ್ನ ಅಭ್ಯಂತರವಿಲ್ಲ. ಮೀಸಲು ವಿಚಾರ ಬಂದರೆ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಅರ್ಜಿ ಸಲ್ಲಿಸಿದ್ದು, ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧನಿದ್ದೇನೆ.I ಗವಿಸಿದ್ದಪ್ಪ ದ್ಯಾಮಣ್ಣವರ, 2023ರ ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net