ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಸ್ಪರ್ಧೆ ಪೂರಕ

RNL HPS ..
Published on

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಸ್ಪರ್ಧಾ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಚಿತ್ರದುರ್ಗ ಡಯಟ್‌ನ ಜಿಲ್ಲಾ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು.

ಹೊಳಲ್ಕೆರೆ ತಾಲೂಕಿನ ಆರ್.ನುಲೇನೂರು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ತಂಬಾಕು ಮುಕ್ತ ಜೀವನ ಶೈಲಿ ವಿಷಯ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಸ್ಪರ್ಧಾ ಚಟುವಟಿಕೆಗಳ ಮಾಹಿತಿ ನೀಡಿ ಮಾತನಾಡಿದರು.

‘ತಂಬಾಕುಮುಕ್ತ ಪೀಳಿಗೆ ಕಡೆಗೆ ಶಾಲಾ ಸವಾಲು’ ಕಾರ್ಯಕ್ರಮ ವಿದ್ಯಾರ್ಥಿ, ಯುವಜನರು ಮತ್ತು ಸಮುದಾಯದಲ್ಲಿ ಹೊಸ ಸಾ ಮಾಜಿಕ ರೂಢಿಗಳನ್ನು, ಆರೋಗ್ಯಕರ ಮತ್ತು ತಂಬಾಕು ಮುಕ್ತ ಜೀವನ ಶೈಲಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಸ್ಪರ್ಧೆ ಆಯೋಜಿಸಲಾಗುವುದು. ಪೋಸ್ಟರ್ ತಯಾರಿಕೆ, ಘೋಷಣೆ, ಕವನ, ಬೀದಿ ನಾಟಕಗಳ ಮೂಲಕ ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಭಾಗವಹಿಸುವ ವಿದ್ಯಾರ್ಥಿಗಳಿಗೆ ಪದಕ ಮತ್ತು ಮೆಚ್ಚುಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ತೀರ್ಪು ಸಮಿತಿ ಆಯ್ಕೆ ಮಾಡಿದ ಅತ್ಯುತ್ತಮ ಶಾಲೆಗಳನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಲಾತ್ತದೆ ಎಂದರು. ಮುಖ್ಯಶಿಕ್ಷಕ ಎಂ.ಶೇಖರಪ್ಪ, ಶಿಕ್ಷಕರಾದ ಕೆ.ಆರ್.ಬಸವರಾಜು, ಎಂ.ವಿ.ನಾಗಶಿಲ್ಪಾ, ಹೇಮಲತಾ, ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net