ಸ್ಪರ್ಧಾ ಮನೋಭಾವ ಬೆಳೆಸಬೇಕು

6
ಕಾಗವಾಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ತಳವಾರ ಮಾತನಾಡಿದರು. ಎಸ್.ಎ.ಕರ್ಕಿ, ವಿ.ಬಿ.ಬುರ್ಲೆ, ಎಸ್.ಎಂ.ಘೋರ್ಪಡೆ ಇದ್ದರು.
Published on

ಕಾಗವಾಡ: ಶಿವಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಹತ್ತು ಹಲವು ಸಾಧನೆ ಮಾಡುತ್ತ, ವಿವಿಧ ಬಗೆಯ ಸ್ಪರ್ಧೆಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಡಾ. ಎಸ್.ಪಿ. ತಳವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಬಿಕಾಂ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎ. ಕರ್ಕಿ, ಪ್ರೊ. ವಿ.ಬಿ.ಬುರ್ಲೆ ಮಾತನಾಡಿದರು.

ಪ್ರೊ. ಎಸ್.ಎಂ. ಘೋರ್ಪಡೆ, ಪ್ರೊ. ಬಿ.ಡಿ. ಧಾಮಣ್ಣವರ, ಪ್ರೊ. ಎಸ್.ಎಸ್. ಫಡತಾರೆ ಇದ್ದರು. ಸಾಧಿಕಾ ಚಿಕ್ಕನ್ನರಸೆ ಸ್ವಾಗತಿಸಿದರು. ಮೇಘಾ ಸ್ವಾಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರನಾಲಿ ಕಟ್ಟಿಕರ, ಕಾವೇರಿ ಬ್ಯಾಕೂಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net