

ಬೆಳಗಾವಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಹಂತದಿಂದಲೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ವ್ಯಕಿತ್ವ ವಿಕಸನವಾಗಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ತಿಳಿಸಿದರು. ನಗರದ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರೀಡಾ ವಿವಿಧ ಸಂಘಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಜತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳು ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಪ್ರೊ.ಶ್ರೀದೇವಿ ಹಿರೇಮಠ ಮಾತನಾಡಿ, ಟಿವಿ ಮತ್ತು ಮೊಬೆಲ್ ಬಿಟ್ಟು ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು. ಅಲ್ಲದೆ, ಬಿಡುವಿನ ಅವಯಲ್ಲಿ ಕ್ರೀಡೆಗಳಲ್ಲಿ ಭಾಗಹಿಸಬೇಕು ಎಂದರು. ಶೈಶಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಶಶಿಕಾಂತ ತಾರದಾಳೆ ಸ್ವಾಗತಿಸಿದರು. ಪ್ರೊ.ಸುಧಾರಾಣಿ ಹುಲಮನಿ, ಪ್ರೊ ರಾಕಾ, ನಂದಿನಿ ಚೌಗಲಾ ಇತರರಿದ್ದರು.