ಬೆಳೆ ಹಾನಿಗೆ ಪರಿಹಾರ ನೀಡಲಿ - ಎಚ್.ಡಿ.ರೇವಣ್ಣ

REVANNA
REVANNA
Published on

ರಾಯಚೂರು ರಾಜ್ಯದಲ್ಲಿ ಮಳೆಯಿಂದ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ಜಿಲ್ಲೆಯಲ್ಲಿಯೇ ಒಂದು ಲಕ್ಷ ಎಕರೆ ಭತ್ತ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ

ಮಾಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಅವಧಿಯಲ್ಲಿ ಗ್ಯಾರಂಟಿ ಯೋಜನೆ ಕೊಟ್ಟಿರುವದಾಗಿ ಹೇಳುತ್ತಲೇ ಮತ್ತೊಂದು ಕೈಯಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಜನರ ಆಕ್ರೋಶ ಇದೆಯೋ ಇಲ್ಲವೋ ಎಂಬುದು ಕಾಲವೇ ಉತ್ತರಿಸುತ್ತದೆ. ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು, ಇದರಿಂದ ರೈತರು ಭತ್ತ ಬೆಳೆಯುವದನ್ನೇ ಕೈ ಬಿಡುವ ಪರಸ್ಥಿತಿ ನಿರ್ಮಾಣವಾಗಿದೆ.

ಭತ್ತಕ್ಕೆ ಬೆಲೆ ಕುಸಿತು ,ಖರೀದಿ ನಡೆಯದೇ ಇರುವದರಿಂದ ರೈತರು ಭತ್ತ ಕೃಷಿ ಲಾಭದಾಯಕವಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಪರಿಹಾರ ನೀಡಬೇಕು ಎಂದರು.

ಗ್ರೇಟರ್ ಬೆಂಗಳೂರು ಮಾಡುತ್ತಾರೋ ಇನ್ನೇನೋ ಮಾಡುತ್ತಾರೋ ಮಾಡಲಿ, ಜನರ ಸಂಕಷ್ಟಕ್ಕೆ ಮೊದಲು ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವ ಹೇಳಿಕೆ ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ ಎಂದರು. ರೇವಣ್ಣನವನ್ನು ಯಾರು ಕುಗ್ಗಿಸುವದಕ್ಕೆ ಆಗುವುದಿಲ್ಲ. ದೇವರು, ಜನತೆ ಮಾತ್ರ ಕುಗ್ಗಿಸಬಹುದು. ಕಾಲ ಬರುತ್ತೆ ಎಲ್ಲವನ್ನು ರಾಜ್ಯದ ಜನತೆ ಮುಂದೆ ಸವಿಸ್ತಾರವಾಗಿ ಹೇಳುವೆ. ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ರೈತರ ಸಂಕಷ್ಟದ ಕುರಿತು ಮಾಹಿತಿ ಪಡೆದಿರುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಲಕ್ಷ್ಮೀಪತಿ ಗಾಣಧಾಳ, ನರಸಿಂಹ ನಾಯಕ, ಹಂಪಯ್ಯ ನಾಯಕ, ನಾಗರಾಜ,ದುಳ್ಳಯ್ಯ ನಾಯಕ, ಆದಿರಾಜ, ಸುಧಾಕರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net