ಪರಿಹಾರ ಬಿಡುಗಡೆ ಆದೇಶ ಪತ್ರ ವಿತರಣೆ

compensation release order letter Issued
Published on

ಹಾನಗಲ್ಲ: ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ಹಾವು ಕಚ್ಚಿ ಆಕಸ್ಮಿಕವಾಗಿ ಸಾವಿಗೀಡಾದ ರೈತರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಮಂಜೂರಾದ ಪರಿಹಾರಧನ ಬಿಡುಗಡೆ ಆದೇಶ ಪತ್ರಗಳನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು.

ತಾಲೂಕಿನ ಹರನಗಿರಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರಪ್ಪ ಬಾಳಿಕಾಯಿ, ಆರೆಗೊಪ್ಪ ಗ್ರಾಮದ ಕೃಷ್ಣ ಸಂಕಪಾಳೆ, ಹೇರೂರ ಗ್ರಾಮದ ಯಲ್ಲಪ್ಪ ಭಾಗಣ್ಣನವರ ಮತ್ತು ಯಳ್ಳೂರ ಗ್ರಾಮದ ಹನುಮಂತಪ್ಪ ಕಮಾಟಿ ಅವರ ಕುಟುಂಬದ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಹಾವು ಕಡಿತದಿಂದ ಸಾವಿಗೀಡಾದ ಹಾವಣಗಿಯ ಶಂಭುಲಿಂಗ ಗುಮಗಂಡಿ, ಚಿಕ್ಕಾಂಶಿ ಹೊಸೂರಿನ ಗಿರೀಶ ಹರಳಳ್ಳಿಮಠ, ಉಪ್ಪುಣಸಿಯ ಬಸವರಾಜ ಕುಳೇನೂರ, ಹಾನಗಲ್ಲಿನ ಶಿದ್ರಾಮಪ್ಪ ಚಿಕ್ಕಣ್ಣನವರ, ಆಡೂರಿನ ಹನುಮಂತಪ್ಪ ಪೋಲೇಶಿ ಮತ್ತು ಸಾವಿಕೇರಿಯ ಶಂಕ್ರಪ್ಪ ಸಾತೇನಹಳ್ಳಿ ಅವರ ಕುಟುಂಬ ಸದಸ್ಯರಿಗೆ 2 ಲಕ್ಷ ರೂ. ಪರಿಹಾರ ಬಿಡುಗಡೆ ಆದೇಶ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಶ್ರೀನಿವಾಸ ಮಾನೆ, ಎಂಥ ಪರಿಸ್ಥಿತಿಯಲ್ಲಿಯೂ ರೈತರು ಆತ್ಮಹತ್ಯೆಯಂಥ ದುಡುಕಿನ ನಿರ್ಣಯಕ್ಕೆ ಬರಬಾರದು. ಕಷ್ಟಗಳು ಸಹಜ, ಆತ್ಮವಿಶ್ವಾಸದಿಂದ ಎದುರಿಸಿದರೆ ಸಮಸ್ಯೆಗಳ ನಿವಾರಣೆ ಸಾಧ್ಯವಿದೆ ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ, ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net