ಅಪಘಾತದಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ

10pnd-3
ಪಾಂಡವಪುರ ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮೃತಪಟ್ಟ ಷೇರುದಾರ ಮಹದೇವು ಅವರ ಪತ್ನಿ ಭಾರತಿ ಅವರಿಗೆ 50 ಸಾವಿರ ವಿಮೆ ಹಣದ ಚೆಕ್‌ನ್ನು ಸಂಘದ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು ಅವರು ಮಂಗಳವಾರ ವಿತರಣೆ ಮಾಡಿದರು. ಡಿ.ಶ್ರೀನಿವಾಸ್, ಕೆ.ಪುಟ್ಟೇಗೌಡ, ಶೋಭಾ, ಕುಳ್ಳೇಗೌಡ, ದಿನೇಶ್, ಸಿ.ಕೆ.ಲೋಕೇಶ್ ಇತರರಿದ್ದರು.
Published on

ಪಾಂಡವಪುರ: ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೆಸಿಸಿ ಸಾಲ ಪಡೆದ ಷೇರುದಾರ ನುಗ್ಗಹಳ್ಳಿ ಗ್ರಾಮದ ಮೃತ ರೈತ ಮಹದೇವು ಅಪಘಾತದಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮೃತರ ಪತ್ನಿ ಭಾರತಿ ಅವರಿಗೆ 50 ಸಾವಿರ ರೂ. ವಿಮೆ ಚೆಕ್ ಅನ್ನು ಮಂಗಳವಾರ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು ಅವರು ವಿತರಣೆ ಮಾಡಿದರು.

ಸಂಘದ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ ಮಾತನಾಡಿ, ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ತಾಲೂಕಿನಲ್ಲಿಯೇ ಮಾದರಿಯಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ರೈತರಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲು ಅನುಕೂಲವಾಗಲು ಶಾಖೆಗೆ ಡಿಸಿಸಿ ಬ್ಯಾಂಕ್ ಶಾಖೆ ಮಂಜೂರು ಮಾಡಿಕೊಡಬೇಕು. ಜತೆಗೆ ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಅನುದಾನ ಮಂಜೂರು ಮಾಡಿಕೊಡಬೇಕು ಹಾಗೂ ಸಂಘದ ವತಿಯಿಂದ ಹೊಸದಾಗಿ 28 ಮಂದಿ ರೈತರು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಕೆಸಿಸಿ ಸಾಲಪಡೆದಿದ್ದ ನುಗ್ಗಹಳ್ಳಿ ಗ್ರಾಮದ ರೈತ ಮಹದೇವು ಅವರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸಹಕಾರ ಸಂಘವು ಇಫ್ರೋ ಟೋಕಿಯೋ ವಿಮೆ ಯೋಜನೆಯಡಿ ರೈತ ಮಹದೇವು ಅವರ ಪತ್ನಿಗೆ 50 ಸಾವಿರ ವಿಮೆ ಹಣದ ಚೆಕ್ ಅನ್ನು ವಿತರಣೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗವ ಉದ್ದೇಶದಿಂದಲೇ ಸಹಕಾರ ಸಂಘವು ಕೆಸಿಸಿ ಸಾಲಪಡೆದ ರೈತರಿಗೆ ಇಫ್ರೋ ಟೋಕಿಯೋ ವಿಮೆ ಯೋಜನೆಯಡಿ ವಿಮೆ ಮಾಡಿಸಲಾಗಿದ್ದು ಒಂದು ವೇಳೆ ರೈತರು ಅಪಘಾತಕ್ಕೆ ಒಳಗಾಗಿ ಮೃತಪಟ್ಟಂತಹ ಸಂದರ್ಭದಲ್ಲಿ ವಿಮೆ ಯೋಜನೆ ಅನುಕೂಲವಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಚಲುವರಾಜು ಹಾಗೂ ಗುರುಸ್ವಾಮಿ ಮಾತನಾಡಿ, ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಜೆ.ರಾಮಕೃಷ್ಣ ಅವರು ಯುವಕರಾಗಿದ್ದು ಕೆಲಸ ಮಾಡಲು ಉತ್ಸಾಹಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು, ಜತೆಗೆ ಬ್ಯಾಂಕಿಂಗ್ ಶಾಖೆ ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೆ.ಪುಟ್ಟೇಗೌಡ, ಸೊಸೈಟಿ ಉಪಾಧ್ಯಕ್ಷೆ ಶೋಭಾ, ನಿರ್ದೇಶಕರಾದ ಕುಳ್ಳೇಗೌಡ, ದಿನೇಶ್, ಸಿ.ಕೆ.ಲೋಕೇಶ್, ಮಹದೇವು ,ಶಿವಶಂಕರ್, ಬೊಮ್ಮರಾಜು, ಬೊಮ್ಮೇಗೌಡ, ಉಷಾ, ಕುಳ್ಳಯ್ಯ, ಈರೇಗೌಡ, ಮುಖಂಡರಾದ ಹೇವಣ್ಣ, ಚಂದ್ರಶೇಖರ್, ರಮೇಶ್, ಗ್ರಾಪಂ ಸದಸ್ಯ ಮಂಜುನಾಥ್, ಪ್ರಭಾಕರ್, ಕಾರ್ಯದರ್ಶಿ ಅರುಣ್‌ಕುಮಾರ್, ನಾಗರಾಜು, ಸಿ.ಆರ್.ಸಂತೋಷ್‌ಕುಮಾರ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net