ಪರಿಹಾರ ನೀಡದ್ದಕ್ಕೆ ಎಸಿ, ಪುರಸಭೆ ಪೀಠೋಪಕರಣ ಜಪ್ತಿ

27BLH5
ನ್ಯಾಯಾಲಯದ ಆದೇಶದಂತೆ ಬೈಲಹೊಂಗಲ ಎಸಿ, ಪುರಸಭೆಯ ಕಚೇರಿಯ ಸಾಮಗ್ರಿ ಜಪ್ತಿ ಮಾಡಲಾಯಿತು. ವಕೀಲರಾದ ಟಿ. ಕೆ. ಸಂತೋಷ, ಸ್ಟ್ಯಾಂಡಲಿ ಪಿಲಿಪ್, ಬೇಲಿಪ್ ಎಸ್. ಬಿ. ದೊಡ್ಡಸಾವಳಗಿ ದೂರುದಾರರು ಇದ್ದರು.
Published on

ಬೈಲಹೊಂಗಲ: ಸ್ವಾಧೀನ ಪಡಿಸಿಕೊಂಡ ಕಷಿಭೂಮಿ ಮಾಲೀಕರಿಗೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಪಟ್ಟಣದ ಉಪವಿಭಾಗಾಧಿಕಾರಿಗಳ, ಪುರಸಭೆಯ ಕಚೇರಿಯ ಸುಮಾರು 37 ಲಕ್ಷ ರೂ. ಮೌಲ್ಯದ ಪೀಠೋಪಕರಣ, ವಾಹನ, ಕಂಪ್ಯೂಟರ್ ಬುಧವಾರ ಜಪ್ತಿ ಮಾಡಲಾಯಿತು.

ಪ್ರಸ್ತುತ ಹಿರಿಯ ದಿವಾಣಿ ನ್ಯಾಯಾಧೀಶರು ಬೈಲಹೊಂಗಲ ಇವರ ಆದೇಶದಂತೆ ಉಪವಿಭಾಗಾಧಿಕಾರಿಗಳ 13 ಮಾನಿಟರ್, 10 ಸಿಪಿಯು, 5 ಕೀ ಬೋರ್ಡ್, 5 ಸಣ್ಣ ಪ್ರಿಂಟರ್, 4 ದೊಡ್ಡ ಪ್ರಿಂಟರ್ ಹಾಗೂ ಒಂದು ಸ್ಕಾೃನರ್, ಕುರ್ಚಿಗಳು, ಕಚೇರಿಯ ವಾಹನ ಮಾಡಲಾಗಿದೆ. ಪುರಸಭೆಯ 5 ಕಂಪ್ಯೂಟರ್, 5 ಸ್ಕಾೃನರ್ 2, 2 ಝೇರಾಕ್ಸ್ ಮಶೀನ್, ಕುರ್ಚಿಗಳು, ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಹುಸೇನಸಾಬ ಬಾಬುಸಾಬ್ ಬೇಪಾರಿ, ಲಾಲಾಸಾಬ ಬಾಬುಸಾಬ್ ಬೇಪಾರಿ, ಮುನೀರ ಬಾಬುಸಾಬ್ ಬೇಪಾರಿ, ಮುಬಾರಕ್ ಇಮಾಮಸಾಬ್ ಬೇಪಾರಿ ಹಾಗೂ ಇತರರಿಗೆ ಸೇರಿದ್ದ ಆರ್.ಎಸ್. ನಂ. 131/2 ರಲ್ಲಿನ 24 ಗುಂಟೆ, ಆರ್.ಎಸ್. ನಂ. 132/2 ರಲ್ಲಿನ 7 ಎಕರೆ 10 ಗುಂಟೆ ಹಾಗೂ 132/1 ರಲ್ಲಿನ 6 ಎಕರೆ 19 ಗುಂಟೆ ಜಮೀನನ್ನು ಕರ್ನಾಟಕ ನಗರ ನೀರು ಸರಬರಾಜು ನಿಗಮದವರು ಒಳ ಚರಂಡಿ ಸಂಸ್ಕರಣೆ ನಿಮಿತ್ತ ಭೂ ಸ್ವಾಧೀನಾಧಿಕಾರಿಗಳು 2012 ರಲ್ಲಿ ವಶಪಡಿಸಿಕೊಂಡಿದ್ದರು. ಅತೀ ಕಡಿಮೆ ಪರಿಹಾರ ನೀಡಿದ ಕಾರಣ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಬೈಲಹೊಂಗಲ ಇಲ್ಲಿ ಎಲ್‌ಎಸಿ ನಂ. 266/12

ಪ್ರಕರಣದ ದಾಖಲಿಸಿದ್ದರು.

ನ್ಯಾಯಾಲಯ ರೈತರ ಪ್ರತಿ ಎಕರೆಗೆ 12.40 ಲಕ್ಷ ರೂ. ಪರಿಹಾರದಂತೆ ಸುಮಾರು 4,41,77,492 ರೂ ನೀಡಬೇಕೆಂದು 2018ರಲ್ಲಿ ಆದೇಶಿಸಲಾಗಿತ್ತು. ಐದು ವರ್ಷಗಳಿಂದ ರೈತರಿಗೆ ಪರಿಹಾರ ನೀಡದೆ ಇದ್ದ ಕಾರಣ ನ್ಯಾಯಾಲಯ ಎಸಿ, ಪುರಸಭೆ ಕಾರ್ಯಾಲಯದ ಜಪ್ತಿ ಆದೇಶದನ್ವಯ ಬುಧವಾರ ಜಪ್ತಿ ಮಾಡಲಾಗಿದೆ.

ವಕೀಲರಾದ ಟಿ.ಕೆ.ಸಂತೋಷ, ಸ್ಟ್ಯಾಂಡಲಿ ಪಿಲಿಪ್, ಮೊಹಮ್ಮದ ಆಗಾ, ವೈಭವ ಬೆಳಗಾವಕರ, ಚೇತನ ಹಡಿಗೆ, ನ್ಯಾಯಾಲಯದ ಬೇಲಿಪ್ ಎಸ್. ಬಿ. ದೊಡ್ಡಸಾವಳಗಿ ದೂರುದಾರರಾದ ಹುಸೇನಸಾಬ್ ಬಾಬುಸಾಬ್ ಬೇಪಾರಿ, ಲಾಲಾಸಾಬ್ ಬಾಬುಸಾಬ್ ಬೇಪಾರಿ,ಮುನೀರ್ ಬಾಬುಸಾಬ್ ಬೇಪಾರಿ, ಮುಬಾರಕ ಇಮಾಮಸಾಬ್ ಬೇಪಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net