ಹಾನಿಯಾದ ಜಮೀನಿಗೆ ಪರಿಹಾರ ನೀಡಿ

sri-2 (7)
Published on

ಶೃಂಗೇರಿ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಜಮೀನುಗಳಿಗೆ ಪರಿಹಾರ ಕೊಡಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ರೈತ ಸಂಘ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನೂಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ಅತಿವೃಷ್ಠಿ ಯಿಂದ ಅಡಕೆ, ಕಾಳುಮೆಣಸು, ಕಾಫಿ, ಏಲಕ್ಕಿ ಬೆಳೆಗಳು ಹಾನಿಯಾಗಿದ್ದು ರೈತರ ಅರ್ಥಿಕ ಸ್ಥಿತಿ ಅತಂತ್ರವಾಗಿದೆ. ಹಾನಿಗೊಳಗಾದ ಪ್ರದೇಶಗಳನ್ನು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಕಾಫಿ ಮತ್ತು ಸಾಂಬಾರು ಮಂಡಳಿಗಳ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ಅತಿವೃಷ್ಠಿ ಪ್ರದೇಶ ಎಂದು ಘೋಷಣೆ ಮಾಡಬೇಕು.ಬೆಳೆಹಾನಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಅದನ್ನು ತಮ್ಮ ಕಾರ್ಯಾಲಯ ಸ್ವೀಕರಿಸಬೇಕು. ಅಂಗಡಿಗಳು ರಸಗೊಬ್ಬರ ಮತ್ತು ಮೈಲುತುತ್ತು ಮಾರಾಟ ಮಾಡುತ್ತಿದ್ದು ಕಳೆದ ಮೂರು ವರ್ಷಗಳಿಂದ ಬೆಳೆಗಳು ಕೊಳೆರೋಗಕ್ಕೆ ತುತ್ತಾಗುತ್ತಿದೆ. ಹಾಗಾಗಿ ಅಂಗಡಿಯವರು ನೀಡುವ ರಸಗೊಬ್ಬರಗಳ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅದರ ವರದಿ ಬಂದ ಬಳಿಕ ಅವುಗಳನ್ನು ರೈತರಿಗೆ ನೀಡಬೇಕು.ಪರವಾನಗಿ ಇಲ್ಲದ ಅಂಗಡಿಗಳು ಗೊಬ್ಬರ ಹಾಗೂ ಮೈಲುತುತ್ತು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದರು.

ರೈತ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ರಾವ್, ಜಿ.ಅನಂತಯ್ಯ, ಚಂದ್ರಪ್ಪ ತೆಕ್ಕೂರು,ಕೂಡಿಮೆಮಕ್ಕಿ ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net