ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಣೆ

raichur
raichur
Published on

ರಾಯಚೂರು ತಾಲ್ಲೂಕಿನ ಮರ್ಚಟಾಳ, ಉಡುಮಗಲ್ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿರುವ ಎರಡು ಕುಟುಂಬಗಳಿಗೆ ತಲಾ ೫ ಲಕ್ಷ ರೂ.ಗಳಂತೆ ಒಟ್ಟು ೧೦ ಲಕ್ಷ ರೂ.ಗಳ ಪರಿಹಾರ ಚೆಕ್‌ನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಶನಿವಾರ ವಿತರಣೆ ಮಾಡಿದರು.

ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮರಣ ಹೊಂದಿದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕರು ಸಾಂತ್ವಾನ ಹೇಳಿ ಮರಣ ಹೊಂದಿದ ೨೪ ಗಂಟೆಯೊಳಗೆ ಎರಡು ಕುಟುಂಬಗಳಿಗೆ ಪರಿಹಾರ ವಿತರಿಸಿದರು.

ಸಿಡಿಲು ಬಡಿದು ಸಾವನ್ನಪ್ಪಿದ ಸಣ್ಣ ಹನುಮಂತ ಕುಟುಂಬಕ್ಕೆ ೫ ಲಕ್ಷ ರೂ. ಮಲ್ಲಮ್ಮ ಉಡಮಗಲ್ ಕುಟುಂಬಕ್ಕೆ ೫ ಲಕ್ಷ ರೂ ಚೆಕ್ ವಿತರಿಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಚಂದ್ರಶೇಖರಗೌಡ,ನಾಗೇAದ್ರಪ್ಪ,ಶಿವಪ್ಪ,ಶಣ್ಮುಕಪ್ಪ,ಮಲ್ಲಿಕಾರ್ಜುನ, ನರಸಿಂಹ,ರಾಮನಗೌಡ,ಮೀನಾಕ್ಷಿ ಮುನಿಯಪ್ಪ,ಈರಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net