

ನಾಗನೂರ: ಗ್ರಾಮದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸದಸ್ಯ ಬಾಳಪ್ಪ ಕಲ್ಲಪ್ಪ ನಾಗರಾಳೆ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಪತ್ನಿ ಮಹಾದೇವಿ ನಾಗರಾಳೆ ಅವರಿಗೆ ಮಂಗಳವಾರ ಸಂಘದ ವತಿಯಿಂದ 2 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಬಸವರಾಜ ತಡಸನವರ, ಶಾಖೆ ಅಧ್ಯಕ್ಷ ವಿಠ್ಠಲ ಕುಕನೂರ, ಮಲ್ಲಪ್ಪ ಬಂಡಿ, ಬಾಳಗೌಡ ಪಾಟೀಲ, ಬಸಯ್ಯ ಮಠದ, ಕಲ್ಮೇಶ ಕಾಮಗೌಡ, ಸಂಜಯ ಸುತಾರ, ಪ್ರಕಾಶ ಜಾಬನ್ನವರ, ಚನ್ನಬಸು ಅಥಣಿ, ರವೀಂದ್ರ ಗೊಜಗೋಜಿ, ಬಸವರಾಜ ನಾಯಿಕ, ಪ್ರಭಾಕರ ಈಟಿ, ದಸ್ತಗೀರ್ ಮುಲ್ಲಾ, ಭೀಮಶೆಪ್ಪ ಬಂಡಿವಡ್ಡರ ಇತರರಿದ್ದರು.