ರಾಸು ಮೃತಪಟ್ಟ ವಾರಸುದಾರರಿಗೆ ಪರಿಹಾರ ಚೆಕ್ ವಿತರಣೆ

16sdp3
Published on

ಸಿದ್ದಾಪುರ: ಧಾರವಾಡ ಹಾಲು ಒಕ್ಕೂಟವು ಹಾಲು ಉತ್ಪಾದಕರ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ರಾಸುಗಳಿಗೆ ಸಬ್ಸಿಡಿಯಲ್ಲಿ ವಿಮಾ ಸೌಲಭ್ಯ ಕಲ್ಪಿಸಿದ್ದು, ವಿಮೆ ಮಾಡಿಸಿರುವ ರಾಸುಗಳು ಮರಣ ಹೊಂದಿದರೆ ಅದರ ವಾರಸುದಾರರಿಗೆ ನೀಡುವ ವಿಮಾ ಹಣದ ಚೆಕ್ ಅನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ವಿತರಿಸಿದರು.

ಕೋಡ್ಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಕಾಶ ಎಸ್. ಹೆಗಡೆ ಅವರಿಗೆ 30 ಸಾವಿರ, ಗಣಪತಿ ನಾಯ್ಕ ಅವರಿಗೆ 35 ಸಾವಿರ ಹಾಗೂ ಬಿಳಗಿ ಹಾಲು ಉತ್ಪಾದಕರ ಸಹಕಾರ ಸಂಘದ ಕಿರಣ ಆರ್. ಶಾನಭಾಗ ಅವರಿಗೆ 30 ಸಾವಿರ ರೂ. ಗಳ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಸ್ತರಣಾಧಿಕಾರಿ ಪ್ರಕಾಶ ಕೆ .ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net